Mekedatu Padayatra: ಕಾಂಗ್ರೆಸ್ಸಿಗರ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ
* ಉಚಿತ ಪೆಟ್ರೋಲ್, ಊಟ, ತಿಂಡಿ, ದುಡ್ಡು, ಮಾಂಸ ಎಲ್ಲಿಂದ ಕೊಡ್ತಿದಾರೆ?
* ಕಾಂಗ್ರೆಸ್‌ನ ಪಾದಯಾತ್ರೆ ಒಂದು ಅಪಹಾಸ್ಯ
* ಇದನ್ನ ಪಾದಯಾತ್ರೆ ಎಂದು ಕರೀತಾರ?
ಚಾಮರಾಜನಗರ(ಮಾ.01): 'ಹಣ ಎಲ್ಲಿಂದ ಬರುತ್ತದೆ? ಬರುವವರೆಲ್ಲರಿಗೂ ಉಚಿತ ಪೆಟ್ರೋಲ್, ಊಟ, ತಿಂಡಿ, ದುಡ್ಡು, ಮಾಂಸ ಎಲ್ಲಿಂದ ಕೊಡ್ತಿದಾರೆ? ಕಾನೂನು ಬಾಹಿರವಾಗಿ ಲೂಟಿ ಮಾಡಿರುವ ಹಣದ ಕೂರುಪ ಪ್ರದರ್ಶನ, ಯಾವುದೋ ವ್ಯಕ್ತಿಯ ಪ್ರಚಾರಕ್ಕೆ ಮಾಡುತ್ತಿರುವ ಕಾರ್ಯಕ್ರಮ ಇದು ಅಂತ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ಸಿಗರ ವಿರುದ್ಧ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಕಿಡಿ ಕಾರಿದ್ದಾರೆ
Russia Ukraine Crisis: ಸಂಧಾನ ಸಭೆ ಅಪೂರ್ಣ: ಎರಡು ದೇಶಗಳ ನಡುವೆ 6ನೇ ದಿನವೂ ಘೋರಯುದ್ಧ
ಇದನ್ನ ಪಾದಯಾತ್ರೆ ಎಂದು ಕರೀತಾರ?. ಬೇಕಿದ್ದರೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ಕೇಂದ್ರಕ್ಕೆ ಹೋಗಲಿ. ಮೇಕೆದಾಟು ಯೋಜನೆಯ ವಿಚಾರಣೆ ಸುಪ್ರಿಂಕೋರ್ಟ್‌ನಲ್ಲಿದೆ. ಇದು ಪಾದಯಾತ್ರೆ ಮಾಡುವ ಸಮಯವಲ್ಲ. ಕಾಂಗ್ರೆಸ್‌ನ ಪಾದಯಾತ್ರೆ ಒಂದು ಅಪಹಾಸ್ಯವಾಗಿದೆ. ಕಾಂಗ್ರೆಸ್‌ನವರು ಜನರ ಮುಂದೆ ಬೆತ್ತಲಾಗಿದ್ದಾರೆ. ಬೀದಿಯಲ್ಲಿ ಅರಚಾಡಿ, ಕಿರುಚಾಡಿಕೊಂಡು ಪಾದಯಾತ್ರೆ ಮಾಡಿದರೆ ಅದಕ್ಕೆ ಅರ್ಥ ಇದೆಯಾ? ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.