ಈ ವಯಸ್ಸಿನಲ್ಲಿ, ಆರೋಗ್ಯದ ಸಮಸ್ಯೆ ನಡುವೆಯೂ ದೇವೇಗೌಡರನ್ನು ಸುತ್ತಾಡಿಸಿದ್ದು ತಪ್ಪು: ಚಲುವರಾಯಸ್ವಾಮಿ
ನಮಗೆ ಇಂತಹ ವಯಸ್ಸಿನಲ್ಲಿ ನಮ್ಮ ತಂದೆ ನೋಡಿಕೊಳ್ಳುವ ಭಾಗ್ಯ ಸಿಗಲಿಲ್ಲ. ನಾನು ಆಗಿದ್ರೆ ದೇವೇಗೌಡರು ಕೂತಿದ್ದ ಕಡೆಯೇ ಅವರನ್ನು ಸುಖ, ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ.
ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಗೆಲುವು ಸಾಧಿಸುವ ಮೂಲಕ, ತಮ್ಮ ರಾಜಕೀಯ ವಿರೋಧಿ ಜೆಡಿಎಸ್ ಅಭ್ಯರ್ಥಿ ಸುರೇಶ್‌ಗೌಡಗೆ ತೀವ್ರ ಮುಖಭಂಗ ಉಂಟುಮಾಡಿದ್ದಾರೆ. ಇಂದು ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ನಮ್ಮ ತಂದೆ ಆಗಿದ್ರೆ, ಕೂತಿದ್ದ ಕಡೆ ಬಹಳ ಸುಖ, ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ. ಅವರು ನನ್ನ ವಿರುದ್ಧ ಏನು ಮಾತನಾಡಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರನ್ನು ಈ ವಯಸ್ಸಿನಲ್ಲಿ ಆರೋಗ್ಯದ ಸಮಸ್ಯೆ ನಡುವೆಯೂ ಸುತ್ತಾಡಿಸಿದ್ದು ತಪ್ಪು ಎಂದು ಆದಿಚುಂಚನಗಿರಿಯಲ್ಲಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ. ಅವರು ಕೂತಿರುವ ಕಡೆ ಆಶೀರ್ವಾದ ತೆಗೆದುಕೊಂಡು ಬರಬೇಕಿತ್ತು. ಅವರು ರಾಜ್ಯ ಸುತ್ತಿದ್ದು ಸರಿಯಲ್ಲ. ಅವರನ್ನು ಸುತ್ತಿಸಿದವರಿಗೆ ದೇವರು ಬುದ್ಧಿಕೊಡಲಿ. ಅವರಿಂದ ಉಪಯೋಗ ಪಡೆದುಕೊಂಡು ಎಂಎಲ್‌ಎ, ಮಂತ್ರಿ, ಮುಖ್ಯಮಂತ್ರಿ ಎಲ್ಲ ಖಾತೆ ಅನುಭವಿಸಿದ್ದಾರೆ. ಈಗಲೂ ಅವರನ್ನು ಬಿಡಲು ತಯಾರು ಇಲ್ಲ ಎಂದು ಚಲುವರಾಯಸ್ವಾಮಿ ದೇವೇಗೌಡರನ್ನ ಹಾಡಿ ಹೊಗಳಿದ್ದಾರೆ.
ಇದನ್ನೂ ವೀಕ್ಷಿಸಿ: Karnataka Election Results 2023: ಡಿಕೆಶಿ, ಸಿದ್ದರಾಮಯ್ಯ ಇಬ್ಬರ ಮನೆ ಮುಂದೆಯೂ ಸಿಎಂ ಬ್ಯಾನರ್ !