ಒಬ್ಬ ಮಂತ್ರಿಯಾಗಿ ಸಾಮಾನ್ಯ ಪ್ರಜೆಗೆ ಆಡುವ ಮಾತಾ ಇದು: ಎಂ.ಬಿ.ಪಾಟೀಲ್‌ ಹೇಳಿಕೆಗೆ ಸೂಲಿಬೆಲೆ ತಿರುಗೇಟು

ಒಬ್ಬ ಮಂತ್ರಿಯಾಗಿ ಸಾಮಾನ್ಯ ಪ್ರಜೆಗೆ ಈ ರೀತಿ ಮಾತನಾಡಬಹುದಾ?. ಲೋಕಲ್‌ ಗೂಂಡಾ ರೀತಿ ಅವರ ಮಾತು ಇದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಸಮಾಜದಲ್ಲಿ ಕೋಮು ಭಾವನೆ ಸೃಷ್ಟಿಸುವ ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯದು. ಒಂದು ವೇಳೆ ಅದನ್ನೇ ಮತ್ತೆ ಮುಂದುವರೆಸಿದ್ರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಂ.ಬಿ. ಪಾಟೀಲ್‌ ಹೇಳಿಕೆ ನೀಡಿದ್ದರು. ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. ಒಬ್ಬ ಲೋಕಲ್‌ ಗೂಂಡಾ ರೀತಿ ಈ ರಾಜ್ಯದ ಮಂತ್ರಿ ಮಾತನಾಡಿದ್ದಾರೆ. ಹಿಟ್ಲರ್‌ ಸರ್ಕಾರ ಎಂಬ ನನ್ನ ಹೇಳಿಕೆಯನ್ನು ಅವರು ಇಲ್ಲಿ ಸಾಬೀತು ಮಾಡುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಅವರು ಮಾತನಾಡಿರುವ ಮಾತು ಹಾಸ್ಯಸ್ಪದವಾಗಿದೆ. ಅದನ್ನು ಸ್ವೀಕಾರ ಮಾಡುತ್ತೇನೆ. ಅವರಿಗೆ ಜನ ಇದಕ್ಕೆ ಅಂತಾನೇ ಅಧಿಕಾರ ನೀಡಿರಬೇಕು. ಅವರ ವಿರುದ್ಧ ಯಾರೂ ಮಾತನಾಡಬಾರದು ಎಂದು ಈ ರೀತಿ ಹೇಳುತ್ತಿದ್ದಾರೆ ಎಂದು ಸೂಲಿಬೆಲೆ ಕಿಡಿಕಾರಿದ್ರು. 

ಇದನ್ನೂ ವೀಕ್ಷಿಸಿ: ಕರ್ಮಭೂಮಿಯಲ್ಲಿ ಬಂಡೆ ಬಾಯಲ್ಲಿ ಸಿಎಂ ಕುರ್ಚಿ ಜಪ : ಕುರ್ಚಿ ಕಾಳಗದಲ್ಲಿ ಕದನ ವಿರಾಮ, ಮುಂದೆ ಕಾದಿದ್ಯಾ ಹೊಸ ಆಟ..?

Related Video