ಜೋರಾಯ್ತು ಲೋಕಸಭೆ ಟಿಕೆಟ್ ಹಂಚಿಕೆ ಕಸರತ್ತು..? ಸಿಇಸಿ ಮೀಟಿಂಗ್‌ನಲ್ಲಿ ಏನೇನು ಚರ್ಚೆ..?

ಮಂಡ್ಯ ಕಮಲಕ್ಕೋ ಅಥವಾ ತೆನೆಹೊತ್ತ ಮಹಿಳೆಗೋ..?
ಕುತೂಹಲದ ಪ್ರಶ್ನೆಗೆ ಇಂದು ಉತ್ತರ ದೊರೆಯುವ ಸಾಧ್ಯತೆ
ಮೈತ್ರಿ ಪಕ್ಷ ಜೆಡಿಎಸ್ ಎರಡಾ ಅಥವಾ ಮೂರು ಕ್ಷೇತ್ರನಾ..?

Share this Video
  • FB
  • Linkdin
  • Whatsapp

ಇಂದು ದೆಹಲಿಯಲ್ಲಿ ಬಿಜೆಪಿ ಮಹತ್ವದ ಸಭೆ ನಡೆಸಲಿದ್ದು, ಲೋಕಸಭಾ(Loksabha) ಚುನಾವಣೆ ಟಿಕೆಟ್(Ticket) ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ. ಇಂದು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ(Central election committee meeting) ಸಂಜೆ 5 ಗಂಟೆಗೆ ನಡೆಯಲಿದೆ. ಬಿಜೆಪಿ (BJP) ಎರಡನೇ ಪಟ್ಟಿ ಕುರಿತು ಚರ್ಚೆ ಸಹ ನಡೆಯಲಿದೆ. 2ನೇ ಪಟ್ಟಿಯಲ್ಲಿ ರಾಜ್ಯದ 20 ಕ್ಷೇತ್ರಗಳಿಗೆ ಹೆಸರುಗಳು ಪ್ರಕಟವಾಗುವ ಸಾಧ್ಯತೆ ಇದೆ. ಒಂದೇ ಹಂತದಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿ ಫೈನಲ್ ಆಗಬಹುದು ಎನ್ನಲಾಗ್ತಿದೆ. ಮೈತ್ರಿ ಸಾಧ್ಯತೆ ಇರುವ ಕ್ಷೇತ್ರಗಳ ಪಟ್ಟಿ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ. ಸಭೆಯಲ್ಲಿ ಭಾಗಿಯಾಗಲಿರುವ ಮಾಜಿ ಸಿಎಂ ಯಡಿಯೂರಪ್ಪ. ನಾಳೆ ಬೆಳಗ್ಗೆ ದೆಹಲಿಗೆ ತೆರಳಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ, ವಿಜಯೇಂದ್ರ ಸೇರಿ ಇನ್ನೂ ಕೆಲವು ನಾಯಕರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. 

ಇದನ್ನೂ ವೀಕ್ಷಿಸಿ: ಕೇಂದ್ರದಿಂದ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್..! ಮೋದಿ ಜೊತೆಯಲ್ಲಿ ಆನ್ ಲೈನ್ ಸೆಲೆಬ್ರೆಟಿಗಳು..!

Related Video