Asianet Suvarna News Asianet Suvarna News

ಕೇಂದ್ರದಿಂದ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್..! ಮೋದಿ ಜೊತೆಯಲ್ಲಿ ಆನ್ ಲೈನ್ ಸೆಲೆಬ್ರೆಟಿಗಳು..!

ಮೊದಲ ಬಾರಿಗೆ ನ್ಯಾಷನಲ್ ಕ್ರಿಯೇಟರ್ಸ್ ಪ್ರಶಸ್ತಿ ಪ್ರದಾನ..!
20 ವಿಭಾಗದಲ್ಲಿ 23 ಯುಟೂಬರ್ಸ್ಗೆ ಪಿಎಂ ಮೋದಿ ಪ್ರಶಸ್ತಿ
ದಿಲ್ಲಿಯಲ್ಲಿ ಭಾರತ್ ಮಂಟಪಂನಲ್ಲಿ ಅದ್ಧೂರಿ ಕಾರ್ಯಕ್ರಮ..!

ಪ್ರಧಾನಿ ಮೋದಿ ಅಂದ್ರೆ ಚುನಾವಣಾ ರಾಜಕೀಯದಲ್ಲಿ ಯಾರೂ ಊಹಿಸಲಾಗದಂತ ಹೆಜ್ಜೆ ಇಟ್ಟು ಗೆದ್ದು ಬರೋ ಕಲಾವಿದ. ಪ್ರತಿ ನಡೆ ಹಿಂದೆ ಒಂದು ಅರ್ಥವಿರುತ್ತೆ, ಉದ್ದೇಶವಿರುತ್ತೆ. ಆ ನಡೆ ಅಷ್ಟೇ ಪ್ರಭಾವ ಶಾಲಿಯಾಗಿರುತ್ತೆ. ಇದೇ ಮೊದಲ ಬಾರಿಗೆ ಮೋದಿ(Narendra Modi) ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಈವೆಂಟ್(National Creators Award) ಮಾಡಿದ್ರು. ದೇಶದ ಬೇರೆ ಬೇರೆ ಕ್ಷೇತ್ರದ ಆನ್ ಲೈನ್ ಕಂಟೆಂಟ್ ಕ್ರಿಯೇಟರ್ಸ್(Online content creators) ಸಮಾಗಮವಾಯ್ತು. ಚುನಾವಣೆ ಸಮಯದಲ್ಲೇ ನಡೆದ ಈ ಕಾರ್ಯಕ್ರಮ ಅನೇಕ ಚರ್ಚೆಯನ್ನೂ ಹುಟ್ಟಾಕಿದೆ. ಲೋಕಸಭಾ ಚುನಾವಣಾ ದಿನಾಂಕದ ಘೋಷಣೆಗೆ ದಿನಗಣನೆ ಶುರುವಾಗಿದೆ. ಎಲೆಕ್ಷನ್‌ಗೂ ತುಂಬಾ ದಿನಗಳೆನೂ ಇಲ್ಲ. ಇಂಥ ಸಮಯದಲ್ಲಿ ಎಲ್ಲಾ ಪಕ್ಷಗಳ ಸಮರಾಭ್ಯಾಸ ತುಂಬಾ ಜೋರಾಗಿದೆ. ಎಲ್ಲಾರ ಗುರಿಯೊಂದೇ, ಗೆಲವು ಗೆಲುವು ಗೆಲುವು. ಆದ್ರೆ ಸದ್ಯ ಮೋದಿ ರಾಜಕೀಯ ವಿರೋಧಿಗಳ ಕೂಟ ಮಹಾಮೈತ್ರಿಯಲ್ಲಿ ಸಾಮರಸ್ಯದ ಬೀಜ ಬಿತ್ತಿ, ಹೂವಾಗಿ ಅರಳೋದನ್ನ ಕಾಯ್ತಾ ಇದೆ. ಇನ್ನೊಂದು ಕಡೆ ಸಮರವೀರ ನರೇಂದ್ರ ಮೋದಿ ಏಕಾಂಗಿಯಾಗಿ ಅವರದೇ ನಾಮಬಲದಲ್ಲಿ ಎನ್ ಡಿ ಎ(NDA) ಮಿತ್ರಕೂಟವನ್ನ ಗೆಲ್ಲಿಸಿಕೊಂಡು ಬರೋಕೆ ಯುದ್ಧಪೋಷಾಕು ತೊಟ್ಟಿದ್ದಾರೆ. ಈ ಹೊತ್ತಿನಲ್ಲಿ ಮೋದಿ ನಡೆಸಿಕೊಟ್ಟ ಒಂದು ವಿನೂತನ ಕಾರ್ಯಕ್ರಮ ಭಾರಿ ಚರ್ಚೆಯನ್ನ ಹುಟ್ಟಿಸಿದೆ. 

ಇದನ್ನೂ ವೀಕ್ಷಿಸಿ:  Water Crisis: ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಹೆಚ್ಚಿದ್ದೇಕೆ..? ಈ ಹಿಂದಿಲ್ಲದ ಬೇಸಿಗೆ ಹಾಹಾಕಾರ ರಾಜಧಾನಿಗೆ ಈಗೇಕೆ..?

Video Top Stories