ರಾಜೀನಾಮೆ ಬೆದರಿಕೆಗೆ ಬಗ್ಗದ ಸಿಎಂ, ಖಾತೆ ಬದಲಾವಣೆಗೆ ಒಲವು ತೋರದ ಹೈಕಮಾಂಡ್, ಆನಂದ್ ಮುಂದಿನ ನಡೆ.?

ಖಾತೆ ಬದಲಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಖಡಕ್ಕಾಗಿ ಹೇಳಿದರೂ, ಆನಂದ್ ಸಿಂಗ್ ಮಾತ್ರ ಪ್ರಬಲ ಖಾತೆಗೆ ಪಟ್ಟು ಹಿಡಿದಿದ್ದಾರೆ. 'ನೋಡಿ ನಾನು ಹೈಕಮಾಂಡ್ ಹೇಳಿದಂತೆ ಮಾಡಿದ್ದೇನೆ. ಖಾತೆ ಬದಲಾವಣೆ ಅಗಬೇಕಾದರೆ ಹೈ ಕಮಾಂಡ್‌ ಭೇಟಿ ಮಾಡಿ' ಎಂದು ಬೊಮ್ಮಾಯಿ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 13): ಖಾತೆ ಬದಲಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಖಡಕ್ಕಾಗಿ ಹೇಳಿದರೂ, ಆನಂದ್ ಸಿಂಗ್ ಮಾತ್ರ ಪ್ರಬಲ ಖಾತೆಗೆ ಪಟ್ಟು ಹಿಡಿದಿದ್ದಾರೆ. 'ನೋಡಿ ನಾನು ಹೈಕಮಾಂಡ್ ಹೇಳಿದಂತೆ ಮಾಡಿದ್ದೇನೆ. ಖಾತೆ ಬದಲಾವಣೆ ಅಗಬೇಕಾದರೆ ಹೈ ಕಮಾಂಡ್‌ ಭೇಟಿ ಮಾಡಿ' ಎಂದು ಬೊಮ್ಮಾಯಿ ಹೇಳಿದ್ದಾರೆ. 

ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಆನಂದ್ ಸಿಂಗ್ ದೆಹಲಿಗೆ ಹೋಗಲಿದ್ದಾರೆ. ಆದರೆ ಖಾತೆ ಬದಲಾವಣೆಗೆ ಹೈಕಮಾಂಡ್ ಒಲವು ತೋರಿಸುತ್ತಿಲ್ಲ. ಸಿಎಂ ಬೊಮ್ಮಾಯಿಗೆ ಹೈಕಮಾಂಡ್ ಸಂದೇಶ ನೀಡಿದೆ ಎನ್ನಲಾಗುತ್ತಿದೆ. 

ಖಾತೆ ಹಂಚಿಕೆ ಅಸಮಾಧಾನ, ಸ್ಥಾನ ವಂಚಿತರ ಅತೃಪ್ತಿ: ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ

 ಆಗಸ್ಟ್ 15 ರ ಬಳಿಕ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುವುದು ಬಹುತೇಕ ಖಚಿತವಾಗಿದೆ. ಅಸಮಾಧಾನಿತರ ಜೊತೆ ಚರ್ಚೆ ನಡೆಸಿ ಬಿಕ್ಕಟ್ಟಿಗೆ ಪೂರ್ಣ ವಿರಾಮ ಹಾಕುವ ಸಾಧ್ಯತೆ ಇದೆ. ಇನ್ನು ರಾಜ್ಯ ಬಿಜೆಪಿ ನಾಯಕರ ಪದೇ ಪದೇ ದೆಹಲಿ ಭೇಟಿಗೆ ಕಡಿವಾಣ ಹಾಕುವ ಸಾಧ್ಯತೆ ಇದೆ.

Related Video