Lok Sabha Election: ಬಿಜೆಪಿಯಲ್ಲಿನ ಅಸಮಾಧಾನ ಶಮನಕ್ಕೆ ಸರ್ಕಸ್: ಇಂದು ಹೊಳಲ್ಕೆರೆಗೆ ವಿಜಯೇಂದ್ರ ಭೇಟಿ

ಬಿಜೆಪಿಯಲ್ಲಿ ಲೋಕಸಭಾ ಚುನಾವಣೆ ಟಿಕೆಟ್‌ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಅಸಮಾಧಾನ ಉಂಟಾಗಿದ್ದು, ಶಮನಕ್ಕೆ ಭಾರೀ ಸರ್ಕಸ್ ಮಾಡಲಾಗುತ್ತಿದೆ.
 

First Published Apr 12, 2024, 11:40 AM IST | Last Updated Apr 12, 2024, 11:40 AM IST

ಲೋಕಸಭಾ ಚುನಾವಣೆ ಹಿನ್ನೆಲೆ (Lok Sabha Election) ಬಿಜೆಪಿಯಲ್ಲಿನ(BJP) ಅಸಮಾಧಾನ ಶಮನಕ್ಕೆ ಸರ್ಕಸ್ ನಡೆಯುತ್ತಿದೆ. ರಾಜ್ಯದಲ್ಲಿ ಜೋರಾಗಿರುವ ಬಂಡಾಯ ಶಮನ ಮಾಡಲು ವಿಜಯೇಂದ್ರ(BY Vijayendra) ಹಾಗೂ ಯಡಿಯೂರಪ್ಪ(B.S. Yediyurappa) ಕಸರತ್ತು ನಡೆಸುತ್ತಿದ್ದಾರೆ. ಈ ವೇಳೆ ಚಿತ್ರದುರ್ಗದ(Chitradurga) ರಘುಚಂದನ್ ಅಸಮಾಧಾನ ಶಮನಗೊಳಿಸಲು ಬಿ.ವೈ. ವಿಜಯೇಂದ್ರ ಎಂಟ್ರಿ ನೀಡಿದ್ದು, ಇಂದು ಹೊಳಲ್ಕೆರೆಗೆ ಆಗಮಿಸಲಿದ್ದಾರೆ. ಈ ಮೂಲಕ ರಘುಚಂದನ್(Raghu Chandan) ಮುನಿಸಿಗೆ ವಿಜಯೇಂದ್ರ ಅವರು ಫುಲ್ ಸ್ಟಾಪ್ ಇಡಲು ಮಾಸ್ಟರ್ ಪ್ಲ್ಯಾನ್‌ ಮಾಡಿದ್ದಾರೆ. ಈ ಕಡೆ ಗೊಂದಲ ಶಮನಕ್ಕೆ ಯಡಿಯೂರಪ್ಪ ಸಹ ಎಂಟ್ರಿ ಕೊಟ್ಟಿದ್ದಾರೆ. ಹಾಗೆಯೇ ನಿನ್ನೆ ಚಿಕ್ಕಮಗಳೂರಿನಲ್ಲಿ ಕೋಟಾ ಪರ ಯಡಿಯೂರಪ್ಪ ಪ್ರಚಾರ ಮಾಡಿದ್ದರು. ಜೊತೆಗೆ ಸಿ.ಟಿ.ರವಿ(CT Ravi) ಪರ ಸಿಂಪತಿ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಬೆಳಗಾವಿಯಲ್ಲಿ ಯಡಿಯೂರಪ್ಪ ಶೆಟ್ಟರ್ ಪರ ಪ್ರಚಾರ ನಡೆಸಿದ್ದು, ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ತುಮಕೂರಲ್ಲಿ ಸೋಮಣ್ಣ ಪರ ಪ್ರಚಾರ ಮಾಡಿದ್ದು, ಇದೇ ವೇಳೆ ಮಾಧುಸ್ವಾಮಿ ಬಂಡಾಯ ಶಮನ ಮಾಡುವ ಯತ್ನ ಮಾಡಿದ್ದಾರೆ. ಇದರ ಜೊತೆಗೆ ಬೀದರ್‌ನಲ್ಲೂ ಗೊಂದಲ ನಿವಾರಣೆಗೆ ಬಿಎಸ್‌ವೈ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್‌ಗೆ ಮತ್ತಷ್ಟು ಹತ್ತಿರವಾದ್ರಾ ರೆಬೆಲ್ಸ್ ? ಬನವಾಸಿಯಲ್ಲಿ 'ಕೈ'ಗೆ ಸೇರ್ಪಡೆಯಾದ ವಿವೇಕ್ ಹೆಬ್ಬಾರ್

Video Top Stories