ಕಮಲವನ್ನು ಗೆಲ್ಲಿಸೋ ಮೊದಲು.. ಬಿಜೆಪಿ ಗೆಲ್ಲುವ ಚಾಲೆಂಜ್..!

ಲೋಕ ಗೆಲ್ಲೋಕೆ ಮೋದಿ ವಿಜಯಾಸ್ತ್ರ ಪ್ರಯೋಗ!
10 ರಿಂದ 12 ಕ್ಷೇತ್ರಗಳಲ್ಲಿ ಟಿಕೆಟ್ ಬದಲಾವಣೆ..!
ಆಂತರಿಕ ಸಮಸ್ಯೆಗಳ ಮೆಟ್ಟಿ ನಿಲ್ಲುವ ಸವಾಲು..!

Share this Video
  • FB
  • Linkdin
  • Whatsapp

ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಬಿಜೆಪಿ(BJP) ಪಾಲಿಗೆ ನಿಜಕ್ಕೂ ಆಘಾತ ನೀಡಿತ್ತು. ಈ ಸೋಲಿನ ಬಳಿಕ ಕಂಗೆಟ್ಟು ಕೂತಿದ್ದ ರಾಜ್ಯ ಬಿಜೆಪಿಗೆ ಈಗ ಹೊಸ ಸಾರಥಿಯ ಘೋಷಣೆಯಾಗಿದೆ. ಶಿಕಾರಿವೀರನ ಪುತ್ರ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ(B.Y.Vijayendra) ಅವರಿಗೆ ಕರ್ನಾಟಕ ಕಮಲ ಪಡೆಯ ಸೇನಾಧಿಪತ್ಯ ದಕ್ಕಿದೆ. ಈ ಕ್ಷಣದಿಂದಲೇ ರಾಜ್ಯ ರಾಜಕಾರಣದ ದಿಕ್ಕುದೆಸೆ ಬದಲಾಗೋ ಸಾಧ್ಯತೆ ದಟ್ಟವಾಗಿದೆ. ಚುನಾವಣೆ ಮುಗಿದಾಗಿನಿಂದಲೂ, ಕರ್ನಾಟಕದ(Karnataka) ಕೇಸರಿ ಕೋಟೆಯಲ್ಲಿ ಸದ್ದು ಮಾಡ್ತಿದ್ದದ್ದು ಎರಡೇ ಪ್ರಶ್ನೆ. ಮೊದಲನೇದು, ಬಿಜೆಪಿ ರಾಜ್ಯಾಧ್ಯಕ್ಷ ಯಾರು ಅನ್ನೋದು. ಇನ್ನೊಂದು ವಿರೋಧ ಪಕ್ಷದ ನಾಯಕ ಯಾರಾಗ್ತಾರೆ ಅನ್ನೋದು. ಆದ್ರೆ ಈ ಪೈಕಿ ಮೊದಲನೇ ಪ್ರಶ್ನೆಗೆ, ಬಿಜೆಪಿ ಹೈಕಮಾಂಡ್ ಕಡೆಗೂ ಉತ್ತರ ಕೊಟ್ಟಿದೆ. ಲೋಕಸಭಾ ಚುನಾವಣೆಯ(Loksabha) ಹೊಸ್ತಿಲಲ್ಲೇ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ.ಅಧ್ಯಕ್ಷ ಪಟ್ಟಕ್ಕೋಸ್ಕರ ಪಟ್ಟು ಹಿಡಿದಿದ್ದ ಹಲವರನ್ನ ಓವರ್ ಟೇಕ್ ಮಾಡಿ, ಕೆಲವರನ್ನ ಸೈಡಿಗೆ ತಳ್ಳಿ ಅಂತೂ, ಮಗನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಮಾಡುವಲ್ಲಿ ಯಡಿಯೂರಪ್ಪನವರು ಯಶಸ್ವಿಯಾಗಿದ್ದಾರೆ. ಆದ್ರೆ ವಿಜಯೇಂದ್ರ ಹಾದಿ ಅಂದುಕೊಂಡಷ್ಟು ಸುಲಭವಿಲ್ಲ. ಯಾಕೆಂದ್ರೆ ಕಾಂಗ್ರೆಸ್ ಮಣಿಸೋದು ನೇರ ಸವಾಲಾಗಿದ್ರೂ ಕೂಡ ಆಂತರಿಕ ಭಿನ್ನಾಭಿಪ್ರಾಯವನ್ನ ಸರಿದೂಗಿಸಿಕೊಂಡು ಹೋಗೋದು ಅತಿ ಮುಖ್ಯ. ವಿಜಯೇಂದ್ರ ಮುಂದೆ ಹತ್ತಾರು ಸವಾಲುಗಳು ಇವೆ. 

ಇದನ್ನೂ ವೀಕ್ಷಿಸಿ: ಹುಟ್ಟು ಹಬ್ಬದಂದು ಭೈರಾದೇವಿ ಟೀಸರ್ ರಿಲೀಸ್..! ಲುಕ್ ನೋಡಿ ಫ್ಯಾನ್ಸ್ ಶಾಕ್..!

Related Video