ಹುಟ್ಟು ಹಬ್ಬದಂದು ಭೈರಾದೇವಿ ಟೀಸರ್ ರಿಲೀಸ್..! ಲುಕ್ ನೋಡಿ ಫ್ಯಾನ್ಸ್ ಶಾಕ್..!
ಸ್ಯಾಂಡಲ್‌ವುಡ್ ಸ್ವೀಟಿಯಾಗಿ ಬಣ್ಣದ ಲೋಕದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ. ಈ ಸ್ವೀಟ್ ಕ್ವಿನ್‌ಗೆ ಬರ್ತ್ ಡೇ ಸಂಭ್ರಮ. ರಾಧಿಕಾ ಕುಮಾರಸ್ವಾಮಿ ಹುಟ್ಟು ಹಬ್ಬದ ಆಚರಣೆ ಸಂದರ್ಭ ಎರಡು ಬಹು ನಿರೀಕ್ಷಿತ ಸಿನಿಮಾಗಳ ಟೀಸರ್ ಅನೌನ್ಸ್ ಮಾಡಿದ್ದಾರೆ.
ರಾಧಿಕಾ ಕುಮಾರ ಸ್ವಾಮಿ.. ವಯಸ್ಸು 36 ಸೌಂದರ್ಯ ಮಾತ್ರ ಡೈಮಂಡ್ ತರ. ಬೆಳ್ಳಿತೆರೆ ಮೇಲೆ ನಾಯಕಿಯಾಗಿ 23 ವರ್ಷ ತುಂಬಿದೆ. ಆದ್ರೆ ರಾಧಿಕಾ ಕ್ರೇಜ್ ಮಾತ್ರ ಕಿಂಚಿತ್ತು ಕಡಿಮೆ ಆಗಿಲ್ಲ. ರವಿಚಂದ್ರನ್ರವ ರವಿ ಬೋಪಣ್ಣ ಸಿನಿಮಾ ಹಾಗೆ ರಾಧಿಕಾ ಒಂದ್ ತರಾ ಮಧಿರೆ ಇದ್ದ ಹಾಗೆ. ಈ ಮಧಿರೆಯಿಂದ ಅದೆಷ್ಟೋ ಹುಡುಗರ ನಿದ್ರೆ ಹಾಳಾಗಿದೆಯೋ. ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ(Radhika Kumaraswamy) 37ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ನಿನ್ನೆ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರಿಗೆ ಅಭಿಮಾನಿಗಳನ್ನು(Fans) ಭೇಟಿ ಮಾಡೋಕೆ ಸಾಧ್ಯ ಆಗಿರಲಿಲ್ಲ. ಹೀಗಾಗಿ ಅವರು ಈ ಬಾರಿ ಜನ್ಮದಿನದಂದು(Birthday) ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಸ್ವೀಟಿ ರಾಧಿಕಾರನ್ನ ಭೇಟಿ ಆಗ್ಬೇಕು. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋ ಆಸೆ ಅದೆಷ್ಟೋ ಗಂಡ್ ಹೈಕ್ಳ ಮೊದಲ ಆಸೆ. ಆದ್ರೆ ರಾಧಿಕಾ ಅವರು ತಮ್ಮ ಅಭಿಮಾನಿಗಳ ಆಸೆ ಪೂರೈಸಿದ್ದಾರೆ. ತಮ್ಮ ಹುಟ್ಟು ಹಬ್ಬದಂದು ಅಭಿಮಾನಿಗಳನ್ನ ಭೇಟಿ ಮಾಡಿ, ಕೇಕ್ ಕಟ್ ಮಾಡಿ ಖುಷಿ ಪಟ್ಟರು.
ಇದನ್ನೂ ವೀಕ್ಷಿಸಿ: ಬಯಲು ಸೀಮೆ ಸುಬ್ರಮಣ್ಯ ಸನ್ನಿಧಿಯಲ್ಲಿ ವಿಭಿನ್ನ ಆಚರಣೆ: ಬಾಲಕನಿಗೆ ತಲೆ ಬೋಳಿಸಿ ಕತ್ತೆ ಮೇಲೆ ಮೆರವಣಿಗೆ!