11ನೇ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ..! ಕೇಸರಿ ಸೈನ್ಯವನ್ನ ಮುನ್ನಡೆಸಿದ ನಾಯಕರು ಇವರು..!

ಎರಡನೇ ಅಧ್ಯಕ್ಷರಾಗಿ ಬಿ.ಬಿ. ಶಿವಪ್ಪ ಆಯ್ಕೆ
1983-1988 ಒಟ್ಟೂ 5 ವರ್ಷ ಅಧ್ಯಕ್ಷ ಗಾದಿ..!
ಮನೆ ಮಾರಿ ಪಕ್ಷ ಸಂಘಟನೆ ಮಾಡಿದ್ದ ನಾಯಕ

First Published Nov 16, 2023, 2:48 PM IST | Last Updated Nov 16, 2023, 2:48 PM IST

ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ವಿಜಯೇಂದ್ರ(BY vijayendra) ಅವರು ಕರ್ನಾಟಕ ಬಿಜೆಪಿಯ 11ನೇ ರಾಜ್ಯಾಧ್ಯಕ್ಷರಾಗಿದ್ದಾರೆ. 1980ರಲ್ಲಿ ಎ.ಕೆ. ಸುಬ್ಬಯ್ಯ ಅವರು ಕರ್ನಾಟಕ(Karnataka) ಬಿಜೆಪಿಯ(BJP) ಮೊದಲ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಮೂರು ವರ್ಷಗಳ ಕಾಲ ಅಂದ್ರೆ 1983 ತನಕ ರಾಜ್ಯಾಧ್ಯಕ್ಷರಾಗಿ(State president) ಕಾರ್ಯ ನಿರ್ವಹಿಸಿದ್ರು. ಒಟ್ಟೂ ನೂರಾಹತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 18 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಆ ವರ್ಷ ಅಭೂತಪೂರ್ವ ಸಾಧನೆ ಮಾಡಿದ್ದು ಜನತಾ ಪಾರ್ಟಿ. ಈಗ ಅನೇಕ ಹೋಳಾಗಿರುವ ಪಕ್ಷ 95 ಕ್ಷೇತ್ರಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಸುಬ್ಬಯ್ಯನವರು ನೇರ ನುಡಿಗೆ ಖ್ಯಾತಿಯನ್ನ ಹೊಂದಿದ್ದವರು. ಕ್ರಮೇಣ ಸಂಘ ಪರಿವಾರದ ವಿರುದ್ಧವೇ ಮಾತನ್ನಾಡೋಕೆ ಶುರು ಮಾಡಿದ್ರು. ಕರ್ನಾಟಕದ ಬಿಜೆಪಿ ಇತಿಹಾಸಕ್ಕೆ ಮೆರಗು ಮತ್ತು ಶೋಭೆ ತಂದು ಕೊಟ್ಟವರು ಬಿ.ಬಿ.ಶಿವಪ್ಪ. ಅವರು ಪಕ್ಷದಿಂದ ಏನೂ ಬಯಸಿದವರಲ್ಲ. ಪಕ್ಷ ಸಂಘಟನೆಗಾಗಿ ಮನೆ ಮಾರಿಕೊಂಡರಲ್ಲದೇ ತನು, ಮನ, ಧನವನ್ನು ಸಮರ್ಪಣೆ ಮಾಡಿದ ಸಜ್ಜನ ರಾಜಕಾರಣಿ. ಪಕ್ಷದ ವರಿಷ್ಠ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಆಗ ಕರ್ನಾಟಕಕ್ಕೆ ಬಂದರೆ ಉಳಿದುಕೊಳ್ಳುತ್ತಿದ್ದು, ಬೆಂಗಳೂರಿನ ಶಾಂತಿನಗರದಲ್ಲಿದ್ದ ಶಿವಪ್ಪನವರ ಮನೆಯಲ್ಲೇ. ಕೇವಲ ಡೆಲ್ಲಿ ಮುಖಂಡರಷ್ಟೇ ಅಲ್ಲ, ಉತ್ತರ, ದಕ್ಷಿಣ ಕರ್ನಾಟಕ ರಾಜಕಾರಣಿಗಳಲ್ಲೇ ಬರುತ್ತಿದ್ದದ್ದು ಶಿವಪ್ಪನವರ ಈ ಮನೆಗೆ. ಬಿಜೆಪಿಯ ಸಂಘಟನೆಯ ನೆಲೆಯಾಗಿದ್ದ ಶಾಂತಿನಗರದ ಮನೆಯನ್ನು ಶಿವಪ್ಪನವರು ಪಕ್ಷ ಸಂಘಟನೆಗಾಗಿ  ಮಾರಿ ಬಿಟ್ಟರು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ರಾಜ್ಯವನ್ನು ಸುತ್ತಾಡಿದ ಶಿವಪ್ಪನವರು ರಾಜಕೀಯದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಅವಳಿಗಾಗಿ ಬಂದವನು 4 ಹೆಣಗಳನ್ನ ಉರುಳಿಸಿದ್ದ..! ಎಸ್ಕೇಪ್ ಆಗಿದ್ದವನು ತಗ್ಲಾಕಿಕೊಂಡಿದ್ದೇಗೆ..?