Asianet Suvarna News Asianet Suvarna News

ಸಿಎಂ ಬದಲಾವಣೆ? ಬಿಎಸ್‌ವೈ ಬಗ್ಗೆ ಹೊರಬಿತ್ತು ಮತ್ತೊಂದು ಭವಿಷ್ಯ!

'ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಎರಡೂವರೆ ವರ್ಷ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ' ಎಂದು ಹಾಸನದಲ್ಲಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. 
 

Nov 26, 2020, 4:29 PM IST

ಬೆಂಗಳೂರು (ನ. 26): ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಎರಡೂವರೆ ವರ್ಷ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ' ಎಂದು ಹಾಸನದಲ್ಲಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. 

ಸಿಎಂ ಬದಲಾವಣೆ ವಿಚಾರ : 'ಸಿದ್ದರಾಮಯ್ಯನವ್ರೇ, ನಿಮಗೆ ಕನಸು ಯಾವಾಗ ಬಿದ್ದಿತ್ತು'?

ವಲಸಿಗರು, ಮೂಲ ಬಿಜೆಪಿಗರು ಎಂಬ ಭೇದಭಾವ ಇಲ್ಲ. ನಾವೆಲ್ಲಾ ಒಂದೇ ಮನೆಯಲ್ಲಿದ್ದೇವೆ. ಒಂದೇ ಕುಟುಂಬದಂತಿದ್ದೇವೆ. ಭಿನ್ನಾಬಿಪ್ರಾಯದ ಪ್ರಶ್ನೆಯೇ ಇಲ್ಲ' ಎಂದು ಕೆ. ಗೋಪಾಲಯ್ಯ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ  ಪ್ರಶ್ನಿಸಿದಾಗ ವರಿಷ್ಠರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.