Asianet Suvarna News Asianet Suvarna News

BK Hariprasad: ಏನೇ ಭಿನ್ನಾಭಿಪ್ರಾಯ ಇದ್ರೂ ಪೆನ್‌ಡ್ರೈವ್‌ನಲ್ಲಿಟ್ಟು ಚುನಾವಣೆ ಬಳಿಕ ಹೇಳ್ತೀನಿ: ಬಿ.ಕೆ. ಹರಿಪ್ರಸಾದ್

ಕಾಂಗ್ರೆಸ್ ಪಕ್ಷ ನನ್ನನ್ನು ಬಳಸಿಕೊಳ್ಳಲಿ, ಬೇರೆಯವರು ಬಳಸಿಕೊಳ್ಳಲು ಬಿಡಲ್ಲ. ಏನೇ ಭಿನ್ನಾಭಿಪ್ರಾಯ ಇದ್ರೂ ಪೆನ್‌ಡ್ರೈವ್‌ನಲ್ಲಿಟ್ಟು ಆಮೇಲೆ ಹೇಳ್ತೀನಿ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಬೆಳಗಾವಿ: ಜಿಲ್ಲೆಯಲ್ಲಿ ಬಿ.ಕೆ. ಹರಿಪ್ರಸಾದ್(BK Hariprasad) ಪೆನ್‌ಡ್ರೈವ್ ಬಾಂಬ್ ಸಿಡಿಸಿದ್ದಾರೆ. ನಾನು ಒಬ್ಬ ಸ್ಟಾರ್ ಕ್ಯಾಂಪೇನರ್. ನನ್ನನ್ನು ಉಪಯೋಗಿಸಿಕೊಳ್ಳಲು ಆಗಲ್ಲ. ನನ್ನ ಅಭಿಪ್ರಾಯ ಪೆನ್‌ಡ್ರೈವ್‌ನಲ್ಲಿ ಹೇಳ್ತೀನಿ ಎಂದಿದ್ದಾರೆ. ಏನೇ ಭಿನ್ನಾಭಿಪ್ರಾಯ ಇದ್ರೂ ಪೆನ್‌ಡ್ರೈವ್‌ನಲ್ಲಿಟ್ಟು(Pen Drive) ಆಮೇಲೆ ಹೇಳ್ತೀನಿ. ಕಾಂಗ್ರೆಸ್(Congress) ಪಕ್ಷ ನನ್ನನ್ನು ಬಳಸಿಕೊಳ್ಳಲಿ, ಬೇರೆಯವರು ಬಳಸಿಕೊಳ್ಳಲು ಬಿಡಲ್ಲ. ದೆಹಲಿಯಿಂದ ರಾಜಕಾರಣ ಮಾಡಿದ್ದೇನೆ ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ನಾನು ಬೆಳಸಿದವರು ಬರೀ ಸಚಿವರಲ್ಲಾ ಇನ್ನು ಏನೇನೋ ಆಗಿದ್ದಾರೆ. ಎಲ್ಲವನ್ನೂ ಪೆನ್‌ಡ್ರೈವ್‌ನಲ್ಲಿ ಇಟ್ಟಿದ್ದೇನೆ. ಚುನಾವಣೆ ಬಳಿಕ ಅದನ್ನು ಬಿಡ್ತೀನಿ. ಚುನಾವಣೆ ಆದ ಮೇಲೆ ಬೆಳಗಾವಿಯಲ್ಲೇ ಪೆನ್‌ಡ್ರೈವ್‌ ಬಿಡ್ತೀನಿ. ರಾಜಕಾರಣದಲ್ಲಿ ಹಲವು ಮುಖಗಳನ್ನು ನೋಡಬೇಕು ಎಂದು ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Lok Sabha Election: ಬಿಜೆಪಿಯಲ್ಲಿನ ಅಸಮಾಧಾನ ಶಮನಕ್ಕೆ ಸರ್ಕಸ್: ಇಂದು ಹೊಳಲ್ಕೆರೆಗೆ ವಿಜಯೇಂದ್ರ ಭೇಟಿ

Video Top Stories