Asianet Suvarna News Asianet Suvarna News
breaking news image

ಮಂತ್ರಿಸ್ಥಾನ ತಪ್ಪಿದ್ದೇ “ಹರಿ” ಕಥೆ "ಉರಿ"ಕಥೆಗೆ ಕಾರಣವಾಯ್ತಾ..?: ಕಿಚ್ಚಿಗೆ ತುಪ್ಪ ಸುರಿದ ಕೇಸರಿ ಕಲಿಗಳು..!

ಸಿಎಂ ಸಿದ್ದು ವಿರೋಧಿ ಬಣದ ಮೊದಲ ಕಿಡಿ ಸ್ಫೋಟ..!
ಸಿದ್ದರಾಮಯ್ಯ ವಿರುದ್ಧ ಸಿಡಿದದ್ದೇಕೆ ಕಟ್ಟರ್ ಕಾಂಗ್ರೆಸ್ಸಿಗ ?
ಮಂತ್ರಿಸ್ಥಾನ ತಪ್ಪಿದ್ದೇ ಹರಿಪ್ರಸಾದ್ ಆಕ್ರೋಶಕ್ಕೆ ಕಾರಣನಾ..?

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ರಾಜಕೀಯ ಕುಸ್ತಿ ಅಖಾಡದ ಪೈಲ್ವಾನನೂ ಹೌದು, ರಣಸಾಹಸ ಗಟ್ಟಿಗನೂ ಹೌದು. ಸಿದ್ದು ಹಾಕೋ ಪಟ್ಟುಗಳು ಅದೆಷ್ಟು ಇಂಟ್ರೆಸ್ಟಿಂಗ್ ಅಂದ್ರೆ, ಆ ಪಟ್ಟುಗಳ ಮುಂದೆ  ಜಟ್ಟಿಗಳು ನೆಲಕ್ಕುರುಳೋದೋ ಗೊತ್ತಾಗಲ್ಲ. ಇನ್ನು ರಾಜಕೀಯ ಪಗಡೆಯಾಟದಲ್ಲೂ ಸಿದ್ದರಾಮಯ್ಯನವರದ್ದು ಎತ್ತಿದ ಕೈ. ದೇವೇಗೌಡ್ರಂಥಾ ದೇವೇಗೌಡ್ರನ್ನೇ ಎದುರು ಹಾಕೊಂಡು ರಾಜಕೀಯ ಮಾಡಿದವರು. ಕಾಂಗ್ರೆಸ್(Congress) ಸೇರಿದ್ಮೇಲೆ ಅತಿರಥ ಮಹಾರಥಿಗಳನ್ನೇ ಮೀರಿಸಿ ಎರಡೆರಡು ಬಾರಿ ಮುಖ್ಯಮಂತ್ರಿ ಆದರು. ರಾಜ್ಯ ರಾಜಕಾರಣದ ಮಹಾವೀರ, ಮಹಾಚತುರ, ಅತಿ ಬಲಿಷ್ಠ ನಾಯಕ ಸಿದ್ದರಾಮಯ್ಯನವರನ್ನು ಎದುರಿಸಿ ನಿಲ್ಲೋದಕ್ಕೆ ಎಂಟೆದೆ ಬೇಕು. ಆ ಎಂಟೆದೆಯನ್ನು ತೋರಿಸೋ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ(BJP) ಇನ್ನೂ ಆಯ್ಕೆ ಮಾಡಿಲ್ಲ. ಆದ್ರೂ ಬಿಜೆಪಿ ನಾಯಕರು ಒಳಗೊಳಗೇ ಹಾಲು ಕುಡಿದಷ್ಟೇ ಖುಷಿಯಲ್ಲಿದ್ದಾರೆ. ಕಾರಣ ಏನ್ ಗೊತ್ತಾ, ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‌ನಲ್ಲೇ ವಿರೋಧ ಪಕ್ಷದ ನಾಯಕರೊಬ್ಬರು ಹುಟ್ಟಿಕೊಂಡಿದ್ದಾರೆ. ಸಿದ್ದು ಮುಖ್ಯಮಂತ್ರಿಯಾಗಿ ಎರಡು ತಿಂಗಳು ಪೂರ್ತಿಯಾದ ಬೆನ್ನಲ್ಲೇ ಅವ್ರು ಸಿದ್ದರಾಮಯ್ಯ ವಿರುದ್ಧ ಸಿಡಿದು ನಿಂತಿದ್ದಾರೆ. ಅಂದ ಹಾಗೆ ಅವ್ರ ಹೆಸರು ಬಿ.ಕೆ ಹರಿಪ್ರಸಾದ್.

ಇದನ್ನೂ ವೀಕ್ಷಿಸಿ:  ತಗ್ಗು ಗುಂಡಿಯಲ್ಲಿ ನಿಂತಿದ್ದ ನೀರು: ಇಬ್ಬರು ಬಾಲಕರು ಬಲಿ

Video Top Stories