Asianet Suvarna News Asianet Suvarna News

ತಗ್ಗು ಗುಂಡಿಯಲ್ಲಿ ನಿಂತಿದ್ದ ನೀರು: ಇಬ್ಬರು ಬಾಲಕರು ಬಲಿ

ಓವರ್‌ಹೆಡ್‌ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ತೆಗೆಯಲಾಗಿದ್ದ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. 
 

ಕಲಬುರಗಿ: ತಗ್ಗು ಗುಂಡಿಯಲ್ಲಿ ನಿಂತಿದ್ದ ಮಳೆ(Rain) ನೀರಿಗೆ ಬಿದ್ದು ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ನಗರದ ದುಬೈ ಕಾಲೋನಿಯಲ್ಲಿ ನಡೆದಿದೆ. ಓವರ್‌ಹೆಡ್ ನೀರಿನ ಟ್ಯಾಂಕ್(tank) ನಿರ್ಮಾಣಕ್ಕೆ 15 ಅಡಿ ಆಳದ ಗುಂಡಿ ತೋಡಲಾಗಿತ್ತು. ನಿರಂತರ ಮಳೆಯಿಂದ ಇದು ಸಂಪೂರ್ಣ ತುಂಬಿ ಹೋಗಿದೆ. ಅಭಿ ಮತ್ತು ಅಜಯ್ ಮೃತ ಬಾಲಕರು. ಇಬ್ಬರ ಮಕ್ಕಳ ಮೃತದೇಹ ಪತ್ತೆಯಾಗಿದೆ. ಇನ್ನೂ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಇವರು ಶನಿವಾರ ಮಧ್ಯಾಹ್ನದಿಂದ ನಾಪತ್ರೆಯಾಗಿದ್ದರು. ಎಲ್‌ & ಟಿ ಕಂಪನಿ ಈ ವಾಟರ್ ಟ್ಯಾಂಕ್‌ನನ್ನು ನಿರ್ಮಿಸುತ್ತಿತ್ತು. ಒಂದು ವರ್ಷ ಕಳೆದ್ರೂ ಕೂಡ ಕಾಮಗಾರಿ ನಿರ್ಮಾಣವಾಗಿಲ್ಲ. ಹಾಗಾಗಿ ಪೋಷಕರು ಕಂಪನಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. 

ಇದನ್ನೂ ವೀಕ್ಷಿಸಿ:  ರಾಜ್ಯಕ್ಕೆ ಕೇಂದ್ರ ಸಚಿವರ ತಂಡ: 25 ಲೋಕಸಭಾ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ