Asianet Suvarna News Asianet Suvarna News

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ: ಘರ್‌ ವಾಪ್ಸಿ ಸಂಕಷ್ಟ!

ಕಲ್ಯಾಣ ಕರ್ನಾಟಕದ 40 ಕ್ಷೇತ್ರಗಳಲ್ಲಿ ಹೆಚ್ಚಿನ ಗೆಲುವು ದಾಖಲಿಸಿ ಹೆಚ್ಚಿನ ಪ್ರಾಶಸ್ತ್ಯ ನೀಡಿತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರ ಒಬ್ಬರ ಹಿಂದೆ ಒಬ್ಬರು ಮತ್ತೆ ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದಾರೆ. 

ಬೆಂಗಳೂರು (ಮಾ.23): ಕಲ್ಯಾಣ ಕರ್ನಾಟಕದ 40 ಕ್ಷೇತ್ರಗಳಲ್ಲಿ ಹೆಚ್ಚಿನ ಗೆಲುವು ದಾಖಲಿಸಿ ಹೆಚ್ಚಿನ ಪ್ರಾಶಸ್ತ್ಯ ನೀಡಿತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರ ಒಬ್ಬರ ಹಿಂದೆ ಒಬ್ಬರು ಮತ್ತೆ ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ 15 ಶಾಸಕರು, ಕಾಂಗ್ರೆಸ್‌ನಲ್ಲಿ 21 ಶಾಸಕರು ಹಾಗೂ ಜೆಡಿಎಸ್‌ನಲ್ಲಿ 4 ಶಾಸಕರು ಒಟ್ಟು 40 ಶಾಸಕರು 2018ರ ಚುನಾವಣೆಯ ಟ್ಯಾಲಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿದ್ದರು. ಇನ್ನು ಕಲ್ಯಾಣ ಕರ್ನಾಟಕದಲ್ಲಿ 2019ರ ಮಲ್ಲಿಕಾರ್ಜುನ ಖರ್ಗೆಯವರ ಸೋಲಿಗೆ ಕಾರಣರಾದಂತಹ ಬಹುತೇಕ ಹಿರಿಯ ಮುಖಂಡರು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಂತವರು. ಇದೀಗ ಅವರೆಲ್ಲರಿಗೂ ಕಾಂಗ್ರೆಸ್‌ ಮತ್ತೆ ಗಾಳ ಹಾಕುತ್ತಿದೆ.