ಬೆಳಗಾವಿ: ಹೆಬ್ಬಾಳಕರ್‌ ವಿರುದ್ಧ ಕಣಕ್ಕಿಳಿತಾರಾ ಶ್ರದ್ಧಾ ಶೆಟ್ಟರ್‌?

*   ಲಕ್ಷ್ಮೀ ಹೆಬ್ಬಾಳಕರ್‌ ಮಣಿಸಲು ರಮೇಶ್‌ ಜಾರಕಿಹೊಳಿ ಪ್ಲಾನ್‌
*   ಶ್ರದ್ಧಾ ಭೇಟಿಯಾದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಂಬಲಿಗರು
*   ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಶ್ರದ್ಧಾಗೆ ಮನವಿ

Share this Video
  • FB
  • Linkdin
  • Whatsapp

ಬೆಳಗಾವಿ(ಅ.21): ಬೆಳಗಾವಿಯಲ್ಲಿ ರಾಜಕೀಯ ಬದ್ಧವೈರಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ಮಣಿಸಲು ರಮೇಶ್‌ ಜಾರಕಿಹೊಳಿ ಪ್ಲಾನ್‌ವೊಂದನ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಲಕ್ಷ್ಮೀ ಹೆಬ್ಬಾಳಕರ್‌ ವಿರುದ್ಧ ಸುರೇಶ್‌ ಅಂಗಡಿ ಪುತ್ರಿ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಸೊಸೆ ಶ್ರದ್ಧಾ ಶೆಟ್ಟರ್‌ ಸ್ಪರ್ಧಿಸಲು ಚಿಂತನೆ ನಡೆದಿದೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಂಬಲಿಗರು ಶ್ರದ್ಧಾ ಅವರನ್ನ ಭೇಟಿಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಶ್ರದ್ಧಾಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಸ್ವತಃ ಶ್ರದ್ಧಾ ಶೆಟ್ಟರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ್ದಾರೆ. 

ಹಾನಗಲ್‌ ಬೈಎಲೆಕ್ಷನ್‌: ಲಿಂಗಾಯತ ಮತ ಸೆಳೆಯಲು ತರಹೇವಾರಿ ತಾಲೀಮು

Related Video