Asianet Suvarna News Asianet Suvarna News

ಪಿಂಪ್, ವೇಶ್ಯೆ, ಗರ್ವಾಲಿ, ಕರ್ನಾಟಕ ನಾಯಕರಿಗೆ ನಾಲಗೆ ಹರಿಬಿಡುವುದೇ ಖಯಾಲಿ!

ರಾಜ್ಯ ರಾಜಕಾರಣಿಗಳ ನೀಚ ಮಾತು, ವಾಕರಿಕೆ ತಂದ ಕರ್ನಾಟಕ ರಾಜಕೀಯ, ಬಿಜೆಪಿ ಸುಳ್ಳಿನ ಫ್ಯಾಕ್ಟಿ,,,ಹೊಸಪೇಟೆಯಲ್ಲಿ ಸಿದ್ದು ವಾಗ್ದಾಳಿ, ಬಜೆಟ್ ಬಳಿಕ ರಾಜ್ಯದಲ್ಲಿ ಬಿಜೆಪಿ ರಥಯಾತ್ರೆ, ಪ್ರಧಾನಿ ಮೋದಿ-ಬಿಎಸ್ ಯಡಿಯೂರಪ್ಪ ಪ್ರತ್ಯೇಕ ಚರ್ಚೆ ಸೇರಿದಂತೆ ಇಂದಿನ ಇಡೀ ದಿನ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಕರ್ನಾಟಕ ಚುನಾವಣೆಗೆ ಮುನ್ನವೇ ರಾಜ್ಯದ ನಾಯಕರು ಪ್ರಜ್ಞೆ ಕಳೆದುಕೊಂಡಿದ್ದಾರೆ. ನಾಯಕರ ಮಾತಿಗೆ ರಾಜ್ಯದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು ಪಿಂಪ್ ಎಂದರೆ, ಮತ್ತೊಬ್ಬರು ವೇಶ್ಯೆ, ಗರ್ವಾಲಿ ಎಂದಿದ್ದಾರೆ ರಾಜ್ಯ ನಾಯಕರು ಎಲ್ಲೇ ಮೀರಿ ವರ್ತಿಸುತ್ತಿದ್ದಾರೆ.ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್, ಪಕ್ಷತೊರೆದು ಬಿಜೆಪಿ ಸೇರಿಕೊಂಡ ನಾಯಕರನ್ನು ವೇಶ್ಯೆಯರು ಎಂದಿದ್ದಾರೆ.  ಈ ಹೇಳಿಕೆ ರಾಜ್ಯ ರಾಜಕರಾಣಿಗಳ ಪದ ಬಳಕೆ ಹಾಗೂ ನೀಚ ನಾಲಗೆಯನ್ನು ಜಗಜ್ಜಾಹೀರು ಮಾಡಿದೆ. ರಾಜಕಾರಣಿಗಳ ಮಾತಿಗೆ ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ. 
 

Video Top Stories