I.N.D.I.A ಮೈತ್ರಿಕೂಟದಲ್ಲಿ ಸ್ಥಾನ ಹೊಂದಾಣಿಕೆ ಕಸರತ್ತು..ಈಗಾಗಲೇ ಅಭ್ಯರ್ಥಿ ಘೋಷಿಸಿದ ಎಸ್‌ಪಿ

ಮೈತ್ರಿ ಹೊರತಾಗಿಯೂ ಕಣಕ್ಕಿಳಿಸಲು ನಿರ್ಧಾರ
ಮೈತ್ರಿ ಪಕ್ಷಗಳ ನಡೆಯಿಂದ ಕಾಂಗ್ರೆಸ್‌ಗೆ ಸಂಕಷ್ಟ
ಪ್ರಧಾನಿ ಅಭ್ಯರ್ಥಿ ವಿಚಾರದಲ್ಲೂ ಭಿನ್ನಮತ

Share this Video
  • FB
  • Linkdin
  • Whatsapp

ಪಂಚರಾಜ್ಯ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಆದ್ರೆ ಆಗಲೇ ವಿರೋಧ ಪಕ್ಷಗಳ ಸಂಘಟನೆಯಲ್ಲಿ ಒಡಕು ಮೂಡಿದಂತೆ ಕಾಣುತ್ತಿದೆ. I.N.D.I.A ಮೈತ್ರಿಕೂಟದಲ್ಲಿ ಸ್ಥಾನ ಹೊಂದಾಣಿಕೆ ಕಸರತ್ತು ನಡೆಯುತ್ತಿದೆ. ಸ್ಥಾನ ಹೊಂದಾಣಿಕೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಕಗ್ಗಂಟು ಮೂಡಿದೆ ಎನ್ನಲಾಗ್ತಿದೆ. ಮೈತ್ರಿ ಹೊರತಾಗಿಯೂ ಕಣಕ್ಕಿಳಿಸಲು ಕೆಲ ಪಕ್ಷಗಳು ನಿರ್ಧಾರ ಮಾಡಿವೆ. ಮೈತ್ರಿ ಪಕ್ಷಗಳ ನಡೆಯಿಂದ ಇದೀಗ ಕಾಂಗ್ರೆಸ್‌ಗೆ(Congress) ಸಂಕಷ್ಟ ಶುರುವಾಗಿದೆ. ಜೊತೆ ಜೊತೆಗೆ ಪ್ರಧಾನಿ ಅಭ್ಯರ್ಥಿ(PM Candidate) ವಿಚಾರದಲ್ಲೂ ಭಿನ್ನಮತ ಮೂಡಿದೆ. ಪ್ರತೀ ಪಕ್ಷದಿಂದಲೂ ತಮ್ಮವರನ್ನೇ ಪಿಎಂ ಅಭ್ಯರ್ಥಿಯೆಂದು ಬಿಂಬಿಸಲು ಪ್ರಯತ್ನ ನಡೆಸಲಾಗುತ್ತಿದೆ. ಆಗಸ್ಟ್ 31ಕ್ಕೆ ಮುಂಬೈನಲ್ಲಿ I.N.D.I.A ಒಕ್ಕೂಟದ ಸಭೆ ನಡೆಯಲಿದೆ. ಸಭೆಗೂ ಮುನ್ನವೇ ಮೈತ್ರಿಕೂಟದಲ್ಲಿ ಭಿನ್ನಮತ ಮೂಡಿದೆ. ಒಗ್ಗಟ್ಟು ಎನ್ನುವ ನಾಯಕರು ಚುನಾವಣೆ ವಿಚಾರದಲ್ಲೇ ಅತೃಪ್ತಿ ಹೊರಹಾಕುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಕ್ಯಾನ್ಸರ್ ಕಾಯಿಲೆಗೆ ಫಾಸ್ಟ್ ಟ್ರ್ಯಾಕ್ ಟ್ರೀಟ್‌ಮೆಂಟ್: ಕಿದ್ವಾಯಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆಗೆ ಹೊಸ ಟೆಕ್ನಾಜಲಿ !

Related Video