ಮೊಟ್ಟೆ ಎಸೆದವ ಯಾರು? ಫೋಟೋ ರಿಲೀಸ್‌ ಮಾಡಿದ ಬಿಜೆಪಿ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮೊಟ್ಟೆ ಎಸೆದವ ಯಾರು ಎಂದು ಬಿಜೆಪಿ ಫೋಟೋ ರಿಲೀಸ್‌ ಮಾಡಿದೆ. 
 

Share this Video
  • FB
  • Linkdin
  • Whatsapp

ಮಡಿಕೇರಿ, (ಆಗಸ್ಟ್.22): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ ಪತ್ಯಾರೋಪಗಳು ಜೋರಾಗಿವೆ.

ಆತ ಕಾಂಗ್ರೆಸ್‌ ಕಾರ್ಯಕರ್ತನಾದ್ರೆ ಏಕೆ ಜೈಲಿಂದ ಬಿಡಿಸಿದ್ರಿ? ಯಾಕೆ ಆಸಕ್ತಿ? ಬಿಜೆಪಿಗೆ ತಿವಿದ ಮಹಾದೇವಪ್ಪ

ಇನ್ನು ಸಿದ್ದರಾಮಯ್ಯನವರ ಕಾರಿನ ಮೇಲೆ ಸಂಪತ್ ಎನ್ನುವ ವ್ಯಕ್ತಿ ಮೊಟ್ಟೆ ಎಸೆದಿರುವುದು ಬೆಳಕಿಗೆ ಬಂದಿದೆ. ಆದ್ರೆ, ಆತ ಯಾವ ಪಕ್ಷದ ಕಾರ್ಯಕರ್ತರ ಎನ್ನುವುದು ಮಾತ್ರ ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಸಂಪತ್‌ ನಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೆ ಕೊಟ್ಟಿದ್ದಾನೆ. ಅಲ್ಲದೇ ಇತ್ತ ಕಾಂಗ್ರೆಸ್ ಆ ಸಂಪತ್ ಬಿಜೆಪಿ ಕಾರ್ಯಕರ್ತ ಎನ್ನುವ ಫೋಟೋಗಳನ್ನ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪತ್ ಯಾವ ಪಕ್ಷದವ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದೀಗ ಬಿಜೆಪಿ ಸಹ ಮೊಟ್ಟೆ ಎಸೆದವ ಯಾರು ಎಂದು ಫೋಟೋ ರಿಲೀಸ್‌ ಮಾಡಿದೆ. 

Related Video