ಅಶ್ವಿನಿ ಪುನೀತ್‌ಗೆ ರಾಜ್ಯಸಭೆ ಟಿಕೆಟ್ ನೀಡಲು ಮುಂದಾಗಿತ್ತಾ ಬಿಜೆಪಿ ? ನಾಯಕರ ಪ್ರಸ್ತಾಪ ತಿರಸ್ಕರಿಸಿದ್ರಾ ದೊಡ್ಮನೆ ಸೊಸೆ ?
ಅಶ್ವಿನಿ ಪುನೀತ್ ನಿರಾಕರಣೆ ನಂತರ ನಾರಾಯಣ ಬಾಂಢಗೆಗೆ ಟಿಕೆಟ್
ಮರಾಠ ಅಭ್ಯರ್ಥಿಗಾಗಿ ಹುಡುಕಾಟ.. ಸಮರ್ಥ ಅಭ್ಯರ್ಥಿ ಸಿಗಲಿಲ್ಲ
ಪಾಟೇಗಾರ ಸಮುದಾಯದ ನಾರಾಯಣ ಬಾಂಢಗೆಗೆ ಟಿಕೆಟ್ ಫೈನಲ್
ಲೋಕಸಭೆ ಹೊಸ್ತಿಲಲ್ಲಿ ರಣತಂತ್ರ ಹೂಡಿರುವ ಕಮಲಪಡೆ. ದೊಡ್ಮನೆ ಸೊಸೆ, ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಗೆ ರಾಜ್ಯಸಭೆ(Rajya Sabha) ಆಫರ್ ನೀಡಿತ್ತು. ಆದರೆ ಬಿಜೆಪಿ(BJP) ಆಫರ್ ತಿರಸ್ಕರಿಸಿರುವ ಅಶ್ವಿನಿ ಪುನೀತ್(Ashwini Puneeth), ರಾಜಕೀಯದಿಂದ ನಮ್ಮ ಕುಟುಂಬ ದೂರ ಎಂದಿದ್ದಾರೆ. ಅಶ್ವಿನಿ ನಿರಾಕರಣೆ ಬಳಿಕ ನಾರಾಯಣ ಬಾಂಢಗೆಗೆ ಟಿಕೆಟ್ ದೊರೆತಿದೆ. ಕರ್ನಾಟಕದಿಂದ(Karnataka) ಒಬಿಸಿ ವರ್ಗಕ್ಕೆ ರಾಜ್ಯಸಭಾ ಸ್ಥಾನ ಎಂದು ಹೈಕಮಾಂಡ್ ಹೇಳಿತ್ತಂತೆ. ಅಭ್ಯರ್ಥಿಯ ಹೆಸರು ಶಿಫಾರಸು ಮಾಡುವಂತೆ ಹೈಕಮಾಂಡ್ ಸೂಚಿಸಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಸರನ್ನು ರಾಜ್ಯ ಬಿಜೆಪಿ ಪ್ರಸ್ತಾಪಿಸಿತ್ತು. ಲೋಕಸಭಾ ಚುನಾವಣೆ(Loksabha) ದೃಷ್ಟಿಯಲ್ಲಿಟ್ಟುಕೊಂಡು ಅಶ್ವಿನಿ ಹೆಸರು ಪ್ರಸ್ತಾಪ ಮಾಡಲಾಗಿತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಳ್ಳೆಯ ಆಯ್ಕೆ ಎಂದು ಹೈಕಮಾಂಡ್ ಹೇಳಿತ್ತಂತೆ. ಅಶ್ವಿನಿ ಅವರು ಒಪ್ಪುತ್ತಾರಾ ಎಂಬುದನ್ನ ತಿಳಿಯಿರಿ ಎಂದಿದ್ದ ಹೈಕಮಾಂಡ್. ಹೈಕಮಾಂಡ್ ಸೂಚನೆ ನಂತರ ಅಶ್ವಿನಿ ಸಂಪರ್ಕಿಸಿದ್ದ ರಾಜ್ಯ ನಾಯಕರು. ಬಿಜೆಪಿ ನಾಯಕರ ಪ್ರಸ್ತಾಪವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜಕೀಯದಿಂದ ನಮ್ಮ ಕುಟುಂಬ ದೂರ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರಂತೆ.
ಇದನ್ನೂ ವೀಕ್ಷಿಸಿ: ಕೇಂದ್ರದ ವಿರುದ್ಧ ವಿಧಾನಸಭೆಯಲ್ಲಿ 2 ನಿರ್ಣಯ ಅಂಗೀಕಾರ: ಮೋದಿ ಮೋದಿ ಎಂದು ಘೋಷಣೆ ಕೂಗಿ ಬಿಜೆಪಿ ಪ್ರತಿರೋಧ