ಕೇಂದ್ರದ ವಿರುದ್ಧ ವಿಧಾನಸಭೆಯಲ್ಲಿ 2 ನಿರ್ಣಯ ಅಂಗೀಕಾರ: ಮೋದಿ ಮೋದಿ ಎಂದು ಘೋಷಣೆ ಕೂಗಿ ಬಿಜೆಪಿ ಪ್ರತಿರೋಧ
ರೈತರ ಗುಂಡಿಕ್ಕಿಕೊಂದ ಸರ್ಕಾರ ಎಂದ ಕೃಷ್ಣ ಭೈರೇಗೌಡ
ಬಿಜೆಪಿಗರ ಗಲಾಟೆ ಮಧ್ಯೆ ಕಲಾಪ ಹತ್ತು ನಿಮಿಷ ಮುಂದಕ್ಕೆ
ಬಳಿಕ ನಡೆದ ಸಂಧಾನ ಸಭೆಯೂ ವಿಫಲ,ಕಲಾಪ ಮುಂದಕ್ಕೆ
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಫೈಟ್ ಜೋರಾಗ್ತಿದ್ದು, ಅನುದಾನ(Grants) ವಿಚಾರದಲ್ಲಿ ಕೇಂದ್ರದ ಜತೆ ರಾಜ್ಯ ಸರ್ಕಾರದ(State government) ಗುದ್ದಾಟ ನಡೆಸುತ್ತಿದೆ. ಕೇಂದ್ರದ ವಿರುದ್ಧ ವಿಧಾನಸಭೆಯಲ್ಲಿ(Vidhanasabhe) 2 ನಿರ್ಣಯ ಅಂಗೀಕಾರ ಮಾಡಲಾಗಿದೆ. ಅನುದಾನ ತಾರತಮ್ಯ ಸರಿಪಡಿಸುವಂತೆ ಒಂದು ನಿರ್ಣಯ ಕೈಗೊಂಡ್ರೆ, ಸ್ವಾಮಿನಾಥನ್ ವರದಿ ಅನುಷ್ಠಾನ, MSP ಬೆಂಬಲ ಬೆಲೆ ನೀಡುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಎರಡು ಅಂಶಗಳ ಜಾರಿಗೆ ಆಗ್ರಹಿಸಿ ಕೇಂದ್ರಕ್ಕೆ ಶಿಫಾರಸ್ಸು ಕಳಿಸಲು ನಿರ್ಧಾರ ಮಾಡಲಾಗಿದೆ. ಸಿಲೇಬಸ್‌ನಲ್ಲಿ ಇಲ್ಲದ ವಿಷಯ ನೋಡಿ ಬಿಜೆಪಿ ಕಂಗಾಲಾಗಿದೆ. ಹೀಗಾಗಿ ಏಕಾಏಕಿ ಮಂಡಿಸಿದ ನಿರ್ಣಯಕ್ಕೆ ಬಿಜೆಪಿ(BJP) ಕೆಂಡಾಮಂಡಲವಾಗಿದೆ. ನಿರ್ಣಯದ ವಿರುದ್ಧ ಸದನದ ಬಾವಿಗಿಳಿದು ಹೋರಾಟ ಮಾಡಿದೆ. ಮೋದಿ ಮೋದಿ(Narendra Modi) ಎಂದು ಘೋಷಣೆ ಕೂಗಿ ಬಿಜೆಪಿ ಪ್ರತಿರೋಧ ವ್ಯಕ್ತವಾಗಿದ್ದು, ಈಗ ಸದನದಲ್ಲೂ ನಿರ್ಣಯ ಮಂಡನೆಯಾಗಿದೆ. ಜೊತೆಗೆ ಪಂಜಾಬ್ ರೈತರ ಪರ ನಿರ್ಣಯ ಪಾಸ್ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಮೋದಿ ಅಧ್ಯಕ್ಷತೆಯಲ್ಲಿ ಮಂತ್ರಿ ಪರಿಷತ್ ಸಭೆ!