Asianet Suvarna News Asianet Suvarna News

ನಿಮ್ಮನ್ನ ನಂಬಿದ್ರೆ ಏನೂ ಸಿಗಲ್ಲ! ಕೈ ಕೊಟ್ಟು ಬಂದ ವಲಸಿಗ ಶಾಸಕರಲ್ಲಿ ಅತೃಪ್ತಿ ಸ್ಫೋಟ!

ಒಂದು ಕಡೆ ಸಚಿವ ಸಂಪುಟ ವಿಸ್ತರಣೆಯೂ ಮಾಡುತ್ತಿಲ್ಲ, ಇನ್ನೊಂದು ಕಡೆ ಸಚಿವ ಸ್ಥಾನವೂ ಸಿಗುತ್ತಿಲ್ಲ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಮಿತ್ರ ಮಂಡಳಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. 

Nov 28, 2020, 10:02 AM IST

ಬೆಂಗಳೂರು (ನ. 28): ಒಂದು ಕಡೆ ಸಚಿವ ಸಂಪುಟ ವಿಸ್ತರಣೆಯೂ ಮಾಡುತ್ತಿಲ್ಲ, ಇನ್ನೊಂದು ಕಡೆ ಸಚಿವ ಸ್ಥಾನವೂ ಸಿಗುತ್ತಿಲ್ಲ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಮಿತ್ರ ಮಂಡಳಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. 

ರೆಡ್ಡಿ ಏಟಿಗೆ ಕಾನೂನು ಸಚಿವ ಮಾಧುಸ್ವಾಮಿ ಹತ್ತಿರ ಓಡಿ ಹೋದ ಆನಂದ್ ಸಿಂಗ್..!

ನಿನ್ನೆ ಖಾಸಗಿ ಹೊಟೇಲ್‌ನಲ್ಲಿ ಮಿತ್ರ ಮಂಡಳಿ ಸಭೆ ನಡೆಸಿದ್ದಾರೆ. ಸಾಹುಕಾರ್ ರಮೇಶ್ ಜಾರಕಿಹೊಳಿ ನಡೆಯ ಬಗ್ಗೆ ಸಭೆಯಲ್ಲಿ ಅಪಸ್ವರ ಎದ್ದಿದೆ. ರಮೇಶ್ ಜಾರಕಹೊಳಿಯನ್ನು ನಂಬಿದ್ರೆ ನಮಗೆ ಮಂತ್ರಿಗಿರಿ ಸಿಗುವುದಿಲ್ಲ.ಸಾಹುಕಾರ್‌ರನ್ನು ಗಂಭೀರವಾಗಿ ಪರಿಗಣಿಸೋದು ಬೇಡ. ಅವರು ನಮ್ಮ ನಾಯಕರಲ್ಲ. ದೆಹಲಿಯಲ್ಲಿ ನಮ್ಮ ಹೆಸರು ಬಳಸಿಕೊಂಡು, ನಾನೇ ನಾಯಕ ಎನ್ನುತ್ತಾರೆ. ಇದರಿಂದ ನಮ್ಮ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಮೂಲ ಶಾಸಕರಿಗೆ ಸ್ಥಾನ ಕೊಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ನಮಗೆ ಕೊಟ್ಟ ಭರವಸೆ ಈಡೇರಿಸುವಂತೆ ಕೇಳೋಣ' ಎಂದು ಮಿತ್ರ ಮಂಡಳಿ ಚರ್ಚಿಸಿದೆ.