Asianet Suvarna News Asianet Suvarna News

ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರ ಸ್ಕೆಚ್‌: ಇವರ ಟ್ರೈನಿಂಗ್‌ ಸೆಂಟರ್‌ ಯಾವುದು ಗೊತ್ತಾ..?

ಐವರು ಶಂಕಿತ ಉಗ್ರರು ಜೈಲಿನಲ್ಲೇ ಇದ್ದುಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ, ಶಂಕಿತ ಉಗ್ರರನ್ನು(Suspected Terrorists) ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಕೊಲೆ ಪ್ರಕರಣ ಆರೋಪದಡಿ ಬಂಧಿತರಾಗಿ ವಿಚಾರಣಾಧೀನ ಕೈದಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರು ಮಂದಿಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಬ್ರೈನ್ ವಾಷ್ ಮಾಡಲಾಗಿದೆ. ಇವರ ನಿಗೂಢ ಹೆಜ್ಜೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಸೆಂಟ್ರಲ್‌ ಜೈಲು(Central Jail) ಇದೀಗ ಉಗ್ರರ ಟೆರರ್‌ ಟ್ರೈನಿಂಗ್‌ ಸ್ಕೂಲ್‌ ಆಯ್ತಾ ಎಂಬ ಅನುಮಾನ ಮೂಡುತ್ತಿದೆ. ಅಲ್ಲದೇ ಮನ ಪರಿವರ್ತನೆ ಕೇಂದ್ರ ಈಗ ಉಗ್ರರ ಉತ್ಪಾದನಾ ಕೇಂದ್ರವಾಗುತ್ತಿದೆಯಾ ಎಂಬ ಅನುಮಾನ ಸಹ ಮೂಡುತ್ತಿದೆ. ಬೆಂಗಳೂರು ಕೇಂದ್ರ ಕಾರಾಗೃಹದ ಅವ್ಯವಸ್ಥೆಗೆ ಸಿಸಿಬಿ ಬೇಸರವನ್ನು ವ್ಯಕ್ತಪಡಿಸಿದೆ. ಜೈಲಿನಿಂದಲೇ ಶಂಕಿತ ಉಗ್ರರು ಸ್ಫೋಟಕ್ಕೆ ಸ್ಕೆಚ್‌ ಹಾಕಿದ್ದರು ಎಂಬ ಭಯಾನಕ ಸಂಗತಿ ಈಗ ಬಯಲಾಗಿದೆ. 

ಇದನ್ನೂ ವೀಕ್ಷಿಸಿ:  ಮೊದಲ ಅಧಿವೇಶನದಲ್ಲೇ ಅಮಾನತು ಅಸ್ತ್ರ: ಸಂಧಾನ ಸಭೆ ಮಾಡ್ತಾರಾ ಸ್ಪೀಕರ್‌..?