ಸಿದ್ದರಾಮಯ್ಯ ಜತೆ ಬಿಜೆಪಿ ನಾಯಕರು ಶಾಮೀಲು ..?: ಸ್ವಪಕ್ಷೀಯರ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

ಸಿದ್ದರಾಮಯ್ಯ ಜೊತೆ ಕೆಲ ಬಿಜೆಪಿ ನಾಯಕರು ಶಾಮೀಲು ಆಗಿರಬಹುದು ಎಂದು ಹೇಳುವ ಮೂಲಕ ಸಂಸದ ಪ್ರತಾಪ್‌ ಸಿಂಹ ಹೊಸ ಬಾಂಬ್‌ ಸಿಡಿಸಿದ್ದಾರೆ.
 

Share this Video
  • FB
  • Linkdin
  • Whatsapp

ಮೈಸೂರು: ಸಿಎಂ ಸಿದ್ದರಾಮಯ್ಯ ಜೊತೆ ಬಿಜೆಪಿಯ ಕೆಲ ಅತಿರಥ ಮಹಾರಥರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಹೊಸ ಬಾಂಬ್ ಸಿಡಿಸಿದ್ದಾರೆ. ಸ್ವಪಕ್ಷೀಯ ಸರ್ಕಾರ ಇದ್ದಾಗ ನಡೆದುಕೊಂಡ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಸರ್ಕಾರದ ನಡವಳಿಕೆ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು. ಆದ್ರೆ ಬಿಜೆಪಿ ಕಾರ್ಯಕರ್ತರು ಯಾವತ್ತೂ ಶಾಮೀಲು ಆಗಿಲ್ಲ. ಸಮಯ ಬಂದಾಗ ಮಾತ್ರ ನಿಮ್ಮ ವಿರುದ್ಧ ಅವರು, ಅವರ ವಿರುದ್ಧ ನೀವು ಟೀಕೆ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ನಮ್ಮವರು ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವು ಹೊರಗೆ ಬಿಡಲೇ ಇಲ್ಲ ಎಂದು ಸ್ವಪಕ್ಷೀಯರ ವಿರುದ್ದವೇ ಹರಿಹಾಯ್ದರು. ಅಲ್ಲದೇ ಕರೆಂಟ್‌ ಬಿಲ್‌ ಹೆಚ್ಚಳ ಮಾಡಿರುವುದರ ಬಗ್ಗೆಯೂ ಹೋರಾಟ ಮಾಡುವುದಾಗಿ ಅವರು ಹೇಳಿದರು.

ಇದನ್ನೂ ವೀಕ್ಷಿಸಿ: ಶಾಸಕ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮೀಗೆ ಶಾಕ್‌: ಆಸ್ತಿಗಳ ಅಟ್ಯಾಚ್‌ಗೆ ಕೋರ್ಟ್‌ ಆದೇಶ

Related Video