Asianet Suvarna News Asianet Suvarna News

ಕಾಂತಾರ ಕತೆಯನ್ನೇ ಹೋಲುತ್ತದೆ ಉಡುಪಿ ವಿವೇಕಾನಂದನ ಕತೆ..!

ಕಾಂತರ ಸಿನಿಮಾ ಕತೆಯನ್ನೇ ಹೋಲುವ ನಿಜ ಪ್ರಸಂಗಕ್ಕೆ ಉಡುಪಿ ಜಿಲ್ಲೆ ಸಾಕ್ಷಿಯಾಗಿದೆ. ಇದು ಕಟ್ಟು ಕತೆ ಎನಿಸಿದ್ರು ಕಟ್ಟುಕಥೆಯಲ್ಲ. ತರ್ಕಕ್ಕೆ ನಿಲುಕದ ಸಂಗತಿಯಾದ್ರೂ ನಡೆದಿದ್ದು ಮಾತ್ರ ಸುಳ್ಳಲ್ಲ.
 

ಬಾಲಕನೋರ್ವನನ್ನು ಮೆರವಣಿಗೆ ಮಾಡಲಾಗ್ತಿದೆ. ಬಾಲಕನ ಜತೆಗೆ ಶ್ವಾನ(Dog) ಇರೋದನ್ನು ಕೂಡ ನೀವು ಗಮನಿಸಬೇಕು. ಯಾಕೆ ಈ ಮೆರವಣಿಗೆ ಅಂತ ನೋಡೋದಾದ್ರೆ ಅದೊಂದು ಅಚ್ಚರಿ. ಊಹೆಗೂ ನಿಲುಕದ ಕಥೆಯೊಂದು ತೆರೆದುಕೊಳ್ಳುತ್ತೆ. ಕಾಂತಾರ (Kantara)ಸಿನಿಮಾ ನಿಮಗೆಲ್ಲ ಗೊತ್ತೇ ಇರುತ್ತೆ. ಕರಾವಳಿಯ ಸೊಬಗನ್ನು ವಿಶ್ವಕ್ಕೆ ಪರಿಚಯಸಿದ ಸಿನಿಮಾವದು. ತುಳುನಾಡ ಮಂದಿಯ ದೈವಭಕ್ತಿಯ ಪರಾಕಾಷ್ಠೆಯ ಪ್ರತೀಕವೂ ಹೌದು, ಇದ್ಯಾಕೆ ಸಿನಿಮಾ ಬಗ್ಗೆ ಹೇಳ್ತಿದ್ದಾರೆ ಅಂತೀರಾ. ಈ ಕಾಂತಾರ ಸಿನಿಮಾಗೂ ಮತ್ತು ಈ ಯುವಕನ ಕತೆಗೂ ದೈವದ(Daiva) ನಂಟಿದೆ ಎಂದೇ ಹೇಳಲಾಗ್ತಿದೆ. ಈ ಯುವಕನ ಹೆಸರು ವಿವೇಕಾನಂದ. ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟಿನ ನಿವಾಸಿ ಶೀನ ನಾಯ್ಕ ಎಂಬುವರ ಪುತ್ರ. ಇದೇ ವಿವೇಕಾನಂದನ(Vivekananda) ಬದುಕಲ್ಲಿ 10 ದಿನಗಳ ಹಿಂದಷ್ಟೇ ಒಂದು ಘಟನೆ ಸಂಭವಿಸಿತ್ತು.

ವಿವೇಕಾನಂದ ಇದ್ದಕ್ಕಿದ್ದಂತೆ ಸೆಪ್ಟೆಂಬರ್ 16ರಂದು ದಟ್ಟಡವಿಯಲ್ಲಿ ಕಾಣೆಯಾಗಿದ್ದ, ಈತನ ಜತೆಗೆ ಪಿಂಟು ಎಂಬ ಸಾಕು ನಾಯಿಯೂ ಕಾಣೆಯಾಗಿತ್ತು. ಗಾಬರಿಗೊಂಡ ಕುಟುಂಬಸ್ಥರು ಹುಡುಕದ ಜಾಗವೇ ಇರಲಿಲ್ಲ. ಹೊತ್ತು ಕಳೆದು ಸಂಜೆಯಾದರೂ ಮಗನ ಗುರುತೇ ಸಿಗದಿದ್ದಾಗ ಪೋಷಕರು ಪೊಲೀಸರಿಗೆ ತಿಳಿಸಿದ್ರು. ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯೂ ಕಾಡಿನ ಕಾನನಗಳಲ್ಲಿ ಶೋಧಕ್ಕಿಳಿದಿದ್ರು. ಹಗಲು-ರಾತ್ರಿ ಎನ್ನದೇ ದಟ್ಟಡವಿಯಲ್ಲಿ ಸುತ್ತಿದ್ರು. ಎಷ್ಟೆಲ್ಲ ಪ್ರಯತ್ನ ಪಟ್ಟರೂ ನೋ ಯೂಸ್. ವಿವೇಕಾನಂದ ಮಾತ್ರ ಪತ್ತೆಯಾಗಿರಲಿಲ್ಲ. ಕಾಡಲ್ಲಿ ಚಿರತೆಗಳೇ ಜಾಸ್ತಿ ಇರೋದ್ರಿಂದ ವಿವೇಕಾನಂದ ಚಿರತೆ ಬಾಯಿಗೆ ತುತ್ತಾಗಿರಬಹುದು ಅಂತಲೇ ಎಲ್ಲರೂ ಕೈಚಲ್ಲಿದ್ರು. ವಿವೇಕಾನಂದನ ಪೋಷಕರು ಇಷ್ಟಕ್ಕೆ ಸುಮ್ಮನಾಗಿರಲಿಲ್ಲ. ದೈವದ ಮೊರೆ ಹೋಗಿದ್ರು.

ಕೊರಗಜ್ಜನ ಸನ್ನಿಧಿಯಲ್ಲೂ ಹರಕೆ ಹೊತ್ತಿದ್ರು. ದೈವಿವಾಣಿ ನುಡಿಯುತ್ತಿದ್ದ ಮಹಿಳೆಯೊಬ್ಬರು ಬಳಿಯೂ ವಿವೇಕಾನಂದನ ಬಗ್ಗೆ ಕೇಳಿದ್ರು.. ಮಹಿಳೆಯಿಂದ ವಿವೇಕಾನಂದನ ಪೋಷಕರಿಗೆ ನೆಮ್ಮದಿಯ ಭರವಸೆ ದೊರಕಿತ್ತು. ವಿವೇಕಾನಂದ ಬದುಕಿದ್ದಾನೆ. ನಿಮ್ಮ ಗದ್ದೆಯಲ್ಲಿರೋ ದೈವದ ಕಲ್ಲನ್ನು ಪೂಜೆ ಮಾಡಿದ್ರೆ ಮಗ ಮತ್ತೆ ಬರ್ತಾನೆ ಎಂದಿದ್ರಂತೆ. ವಿವೇಕಾನಂದನ ಪೋಷಕರ ಪ್ರಾರ್ಥನೆ ಫಲಿಸಿತ್ತು. ಕಾಡಲ್ಲಿ ಕಾಣೆಯಾಗಿದ್ದ ಮಗ ವಾಪಸ್ಸಾಗಿದ್ದ, ಮಗನ ಜೊತೆಗೆ ಶ್ವಾನವೂ ಮರಳಿ ಬಂದಿತ್ತು. ಸುದ್ದಿ ತಿಳಿದ ಗ್ರಾಮಸ್ಥರೆಲ್ಲ ಇದು ದೈವ ಪವಾಡವೇ ಅಂದಿದ್ರು. ದಟ್ಟಡವಿಯಲ್ಲಿ ವ್ಯಾಘ್ರಗಳ ಅಟ್ಟಹಾಸದ ಮಧ್ಯೆಯೂ 10 ದಿನ ಕಳೆದು ಸುರಕ್ಷಿತವಾಗಿ ಬಂದ ಯುವಕ ಮತ್ತು ಶ್ವಾನವನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿದ್ರು.

ಇದನ್ನೂ ವೀಕ್ಷಿಸಿ:  ಮಲಗಿದ್ದ ಮಗು ಮೇಲೆ ಬಿದ್ದ ಕಲ್ಲು, ಕಂದಮ್ಮ ಸಾವು: 2 ಲಕ್ಷ ರೂ.ನೆರವು ನೀಡಿದ ಸಚಿವ ಜಮೀರ್ ಅಹ್ಮದ್