Loksabha: ರಣಕಲಿಗಳ ಹುಡುಕಾಟದಲ್ಲಿ ಘಟಾನುಘಟಿ ಪಕ್ಷಗಳು..! ಯಾವ ಕ್ಷೇತ್ರ ಯಾರ ಪಾಲು..ಟೆನ್ಷನ್‌ಗೆ ಕಾರಣವೇನು..?
ಹಸ್ತಪಾಳಯದ ನಿಗೂಢ ವ್ಯೂಹಕ್ಕೆ ಪದ್ಮಪಡೆ ರಹಸ್ಯ ತಂತ್ರ!
ದೆಹಲಿಯಲ್ಲಿ ಸಿದ್ಧಗೊಳ್ಳುತ್ತಿದೆ ಅತಿರಥ-ಮಹಾರಥರ ಲಿಸ್ಟ್ !
ಮಹಾರಥರಿಗೆ ಟಿಕೆಟ್ ಕೊಡಿಸಲು ಸಿದ್ಧವಾಯ್ತು ರಣತಂತ್ರ!
ರಾಷ್ಟ್ರ ರಾಜಧಾನಿಯಲ್ಲಿ ಚುರುಕಾದಿದೆ ರಾಜ್ಯ ರಾಜಕಾರಣ!
ರಣಕಲಿಗಳ ಹುಡುಕಾಟದಲ್ಲಿ ಮುಳುಗಿ ಹೋಗಿವೆ ಘಟಾನುಘಟಿ ಪಕ್ಷಗಳು. ಮೂರು ಪಕ್ಷಗಳನ್ನೂ ಕಾಡ್ತಾ ಇರೋದು ಒಂದೇ ಪ್ರಶ್ನೆ. ಯಾವ ಕ್ಷೇತ್ರ ಯಾರ ಪಾಲು ಅಂತ. ಲೋಕಸಂಗ್ರಾಮಕ್ಕೆ(Loksabha) ದಿನಗಣನೆ ಶುರುವಾಗಿದೆ. ಪ್ರತಿಯೊಂದು ರಾಜ್ಯದಲ್ಲೂ, ರಾಜಕೀಯ ರಣಾಂಗಣ ಸಂಸಿದ್ಧವಾಗ್ತಾ ಇದೆ.
ಆ ಕಡೆ ಬಿಜೆಪಿ(BJP) ನಾಯಕತ್ವದ ಎನ್‌ಡಿಎ(NDA),ಇನ್ನೊಂದು ಕಡೆ ಕಾಂಗ್ರೆಸ್ ಮುಂದಾಳ್ತನದ ಐಎನ್‌ಡಿಐಎ ಎರಡೂ ಕಡೆಯಲ್ಲೂ, ಅತಿರಥ ಮಹಾರಥರಿಗಾಗಿ ಮಹಾಶೋಧ ಕಾರ್ಯ ನಡೀತಿದೆ. ಸಂಗ್ರಾಮಕ್ಕೆ ಯಾರನ್ನ ಕಳಿಸೋದು ಅಂತ ಎರಡೂ ಕಡೆಯೂ ಮೀಟಿಂಗ್ ಮೇಲೆ ಮೀಟಿಂಗ್ ನಡೀತಿದೆ. ಲೋಕಸಭೆ ಮಹಾ ಸಮರದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರೋ ಬಿಜೆಪಿ ಯುದ್ಧ ಸನ್ನದ್ಧವಾಗ್ತಾ ಇದೆ. ಈಗಾಗಲೇ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರೋ ಬಿಜೆಪಿ ಎರಡನೇ ಪಟ್ಟಿ ಸಿದ್ಧಪಡಿಸೋ ಕಸರತ್ತು ಶುರುಮಾಡಿದೆ. ದೆಹಲಿಯಲ್ಲಿ ಅಮಿತ್ ಶಾ, ಜೆಪಿ ನಡ್ಡಾ ನೇತೃತ್ವದಲ್ಲಿ ಪ್ರಬುದ್ಧರ ಸಭೆ ನಡೆದಿದೆ. ಒಟ್ಟಾರೆ, 10 ರಾಜ್ಯಗಳ ನಾಯಕರೊಂದಿಗೆ ಮೀಟಿಂಗ್ ಮಾಡಿ ಟಿಕೆಟ್ ಫೈನಲ್ ಮಾಡೋ ಮಹಾಪ್ರಯತ್ನ ನಡೆದಿದೆ.
ಇದನ್ನೂ ವೀಕ್ಷಿಸಿ: Uttara kannada: ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಪ್ರಾರಂಭ: ಭಾರತ್ ಏರ್ ಫೈ ನೂತನ ಸಂಪರ್ಕ ಸೇವೆ