Asianet Suvarna News Asianet Suvarna News

ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಹುದ್ದೆ ಇಲ್ಲ, ಬೇಡ ಅಂದಿದ್ಯಾಕೆ ಹೈಕಮಾಂಡ್..?

ಈ ಬಾರಿಯ ಒಂದು ವಿಶೇಷತೆ ಎಂದರೆ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ವರಿಷ್ಠರು ಒಲವು ತೋರಿಲ್ಲ.ಡಿಸಿಎಂ ಹುದ್ದೆಯಿಂದ ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ ಹೆಚ್ಚಿನ ಅನುಕೂಲವೇನೂ ಆಗಿಲ್ಲ ಎಂಬ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಆ. 04): ಇಂದು ಮಧ್ಯಾಹ್ನ 2.15 ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿಯ ಒಂದು ವಿಶೇಷತೆ ಎಂದರೆ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ವರಿಷ್ಠರು ಒಲವು ತೋರಿಲ್ಲ. ಹಿಂದಿನ ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಮೂವರು ಉಪಮುಖ್ಯಮಂತ್ರಿಗಳಿದ್ದರು.

ಸಚಿವ ಸಂಪುಟ ಪಟ್ಟಿಯಲ್ಲಿ ಭಾರೀ ಟ್ವಿಸ್ಟ್; Exclusive ಡಿಟೇಲ್ಸ್ ಇಲ್ಲಿದೆ

ಆದರೆ, ಉಪಮುಖ್ಯಮಂತ್ರಿ ಹುದ್ದೆಯಿಂದ ಪಕ್ಷಕ್ಕಾಗಲಿ ಅಥವಾ ಸರ್ಕಾರಕ್ಕಾಗಲಿ ಹೆಚ್ಚಿನ ಅನುಕೂಲವೇನೂ ಆಗಿಲ್ಲ ಎಂಬ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಈ ಸಲ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಅನೇಕರು ಕಣ್ಣಿಟ್ಟಿದ್ದರಿಂದ ಯಾರಿಗೆ ನೀಡಿದರೂ ಅದು ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಹುದ್ದೆಯ ಸೃಷ್ಟಿಯೇ ಬೇಡ ಎಂಬ ನಿಲುವಿಗೆ ಬರಲಾಯಿತು ಎಂದೂ ಹೇಳಲಾಗುತ್ತಿದೆ.
 

Video Top Stories