News Hour: ಸಂಡೂರು ಸೋಲಿನ ಬೆಂಕಿ: ಬಿಜೆಪಿಯಲ್ಲಿ ಬಂಡಾಯದ ಕಿಡಿ
ಸಂಡೂರು ಉಪಚುನಾವಣೆ ಸೋಲಿನ ಹೊಣೆ ಶ್ರೀರಾಮುಲು ಅವರದ್ದು ಎಂಬ ಅಗರ್ವಾಲ್ ಹೇಳಿಕೆ ಬಿಜೆಪಿಯಲ್ಲಿ ಬಂಡಾಯಕ್ಕೆ ಕಾರಣವಾಗಿದೆ. ಶ್ರೀರಾಮುಲು ವಿರುದ್ಧ ಬಂಗಾರು ಹನುಮಂತು ರಣತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಖರ್ಗೆ, ಪರಮೇಶ್ವರ್, ಡಿಕೆಶಿ ಮತ್ತು ವಿಶ್ವನಾಥ್ ನಡುವೆ ಪೈಪೋಟಿ ನಡೆಯುತ್ತಿದೆ.
ಬೆಂಗಳೂರು (ಜ.22): ಬಡಿದಾಟಕ್ಕೆ ಬ್ರೇಕ್ ಹಾಕಬೇಕಿದ್ದ ಉಸ್ತುವಾರಿ ವಿರುದ್ಧವೇ ಬಂಡಾಯ ಶುರುವಾಗಿದೆ. ಸಂಡೂರು ಸೋಲಿನ ಹೆಸರಲ್ಲಿ ಅಗರವಾಲ್- ರಾಮುಲು ಜಟಾಪಟಿ ನಡೆದಿದೆ. ರೆಡ್ಡಿ ಮಾತು ಕೇಳಿದರೆ ಪಕ್ಷ ಬಿಡಲು ಸಿದ್ಧ ಎಂದು ಘೋಷಣೆ ಮಾಡಿದ್ದಾರೆ.
ಬಳ್ಳಾರಿಯ ಸಂಡೂರು ಉಪಚುನಾವಣೆಯ ಸೋಲಿಗೆ ಶ್ರೀರಾಮುಲು ಅವರೇ ಕಾರಣ ಎಂದು ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಇನ್ನೊಂದೆಡೆ ಶ್ರೀರಾಮುಲು ವಿರುದ್ಧ ಬಂಗಾರು ಹನುಮಂತು ರಣತಂತ್ರ ರೂಪಿಸಿದ್ದಾರೆ.
News Hour: ಸಮಾವೇಶ ಸಭೆ ನೆಪ.. ಮನವೊಲಿಕೆ ಜಪ!
ಕಾಂಗ್ರೆಸ್ ನಲ್ಲಿ ಮೌನರಾಗದ ಹಿಂದೆ ಕುರ್ಚಿ ಕಿಚ್ಚು ಇದ್ದಂತೆ ಕಾಣುತ್ತಿದೆ. ಖರ್ಗೆ ತ್ಯಾಗದ ಮಾತಿಗೆ ಪರಮೇಶ್ವರ್ ಸಹಮತ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಸಿಎಂ ಆಗೋದು ತಪ್ಪಿಸಲಾಗಲ್ಲ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.