News Hour: ಕಾಂಗ್ರೆಸ್, ಬಿಜೆಪಿ ಬಂಡಾಯ.. ಜೆಡಿಎಸ್ ಬಂಡವಾಳ!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷದಲ್ಲಿ ಬಂಡಾಯವೆದ್ದವರಿಗೆ ಜೆಡಿಎಸ್‌ ರತ್ನಗಂಬಳಿಯ ಸ್ವಾಗತ ನೀಡುತ್ತಿದೆ. ಈ ಎರಡೂ ಪಕ್ಷದಲ್ಲಿ ಟಿಕೆಟ್‌ ಸಿಗದೇ ಇದ್ದವರಿಗೆ ಜೆಡಿಎಸ್‌ನಲ್ಲಿ ಟಿಕೆಟ್‌ ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಏ.13): ರಾಜ್ಯ ರಾಜಕೀಯದಲ್ಲಿ ಈಗ ಬಂಡಾಯದ ಬಿರುಗಾಳಿ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲ ಉಂಟಾಗಿರುವ ಟಿಕೆಟ್‌ ಅಸಮಾಧಾನ ಜೆಡಿಎಸ್‌ಗೆ ಬಂಡವಾಳವಾಗಿದೆ. ರಾಷ್ಟ್ರೀಯ ಪಕ್ಷಗಳಲ್ಲಿ ಬಂಡೆದ್ದವರಿಗೆ ಜೆಡಿಎಸ್ ನಾಯಕರಿಂದ ಸ್ವಾಗತ ಸಿಗುತ್ತಿದೆ.

ಕಡೂರು ಕ್ಷೇತ್ರದಲ್ಲಿ ಕೆಎಸ್‌ ಆನಂದ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ ಬೆನ್ನಲ್ಲಿಯೇ ಟಿಕೆಟ್‌ ಆಕಾಂಕ್ಷಿಯಾಗಿದ್ದ ವೈಎಸ್‌ವಿ ದತ್ತಾ ಜೆಡಿಎಸ್‌ ಕೂಡಿಕೊಂಡಿದ್ದು, ಸ್ಪರ್ಧೆ ಮಾಡಲಿದ್ದಾರೆ. ಇನ್ನು ಚಿತ್ರದುರ್ಗದಲ್ಲಿ ಕೆಸಿ ವೀರೇಂದ್ರಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರೆ, ಬಂಡಾಯಗಾರ ರಘು ಆಚಾರ್‌ ಜೆಡಿಎಸ್‌ ಸೇರಿದ್ದಾರೆ.

ಬಿಜೆಪಿಯೊಳಗಿನ ಬಂಡಾಯದ ಕಿಚ್ಚು, ಕಾಂಗ್ರೆಸ್, ಜೆಡಿಎಸ್ ಗೆ ಲಾಭ?

ಇನ್ನು ಬಿಜೆಪಿ ಪಕ್ಷಕ್ಕೆ ಬರೋದಾರೆ, ಗುರುಸಿದ್ದಪ್ಪ ದ್ಯಾಮಣ್ಣನವರ್ ಬಿಜೆಪಿ ಹಾವೇರಿಯಿಂದ ಟಿಕೆಟ್‌ ನೀಡಿದ್ದು, ನೆಹರು ಓಲೇಕಾರ್‌ ಈಗ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಅರಸೀಕೆರೆ ಕ್ಷೇತ್ರದಲ್ಲಿ ಜಿ.ವಿ ಬಸವರಾಜುಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಇದರ ಬೆನ್ನಲ್ಲಿಯೇ ಎನ್‌ ಆರ್‌ಸಂತೋಷ್‌ ಜೆಡಿಎಸ್‌ನತ್ತ ತೆರಳಿದ್ದಾರೆ.

Related Video