ಬಿಜೆಪಿ ಅಭ್ಯರ್ಥಿ ವಿಜುಗೌಡ ವಿರುದ್ಧ ಗೂಂಡಾಗಿರಿ ಆರೋಪ: ಫೈರಿಂಗ್‌ ವಿಡಿಯೋ !

ಬಿಜೆಪಿ ಅಭ್ಯರ್ಥಿ ವಿಜುಗೌಡ ವಿರುದ್ಧ ರಾಜು ಆಲಗೂರ್‌ ಆರೋಪ
ಫೋನ್‌ ಮೂಲಕ ಧಮ್ಕಿ ಹಾಕಿ ವಿಜುಗೌಡ ಗೂಂಡಾಗಿರಿ
ವಿಜಯಪುರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಜು ಆಲಗೂರ್‌ ಆರೋಪ

First Published May 4, 2023, 3:04 PM IST | Last Updated May 4, 2023, 3:04 PM IST

ವಿಜಯಪುರ: ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಗೂಂಡಾಗಿರಿ ಮಾಡ್ತಿದ್ದಾರೆ ಎಂದು ರಾಜು ಆಲಗೂರ್‌ ಆರೋಪ ಮಾಡಿದ್ದಾರೆ. ಫೋನ್‌ ಮೂಲಕ ಧಮ್ಕಿ ಹಾಕಿ ಗೂಂಡಾಗಿರಿ ಮಾಡ್ತಿದ್ದಾರೆ. ಬಿಹಾರ ಮಾದರಿಯಲ್ಲಿ ಬೆದರಿಕೆ, ಧಮ್ಕಿ ಹಾಕುತ್ತಿದ್ದಾರೆ ಎಂದು ವಿಜಯಪುರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಜು ಆಲಗೂರ್‌ ಆರೋಪ ಮಾಡಿದ್ದಾರೆ. ಅಲ್ಲದೇ ಎಪಿಎಂಸಿ ಚುನಾವಣೆಯಲ್ಲಿ ವಿಜುಗೌಡ ಗಾಳಿಯಲ್ಲಿ ಗುಂಡು ಹಾರಿಸಿದ್ರು. ಎಲ್ಲಾ ನಾಯಕರ ಎದುರೇ ಗಾಳಿಯಲ್ಲಿ ಫೈರಿಂಗ್‌ ಮಾಡಿದ್ದರು. ಈಗ ಜನರನ್ನು ಹೆದರಿಸಿ, ಬೆದರಿಸಿ ಮತ ಹಾಕಿಸಿಕೊಳ್ಳಲು ವಿಜುಗೌಡ ಪ್ಲ್ಯಾನ್‌ ಮಾಡುತ್ತಿದ್ದಾರೆ ರಾಜು ಆಲಗೂರ್‌ ಆರೋಪಿಸಿದ್ದಾರೆ.

ಇದನ್ನೂ ವೀಕ್ಷಿಸಿ: ನಾರಾಯಣ ಗೌಡ ಕಾರ್‌ ತಡೆದು ಜೆಡಿಎಸ್‌ ಕಾರ್ಯಕರ್ತರಿಂದ ಕಿರಿಕ್: ಹೆಚ್‌ಡಿಡಿ, ಹೆಚ್‌ಡಿಕೆ ಪರ ಘೋಷಣೆ

Video Top Stories