Asianet Suvarna News Asianet Suvarna News

Sam Pitroda : ಕಾಂಗ್ರೆಸ್‌ ನಾಯಕನ ಆಸ್ತಿ ಹೇಳಿಕೆ ವಿವಾದ: 'ಮಕ್ಕಳಿಗೆ ಶೇ.45ರಷ್ಟಂತೆ, ಸರ್ಕಾರಕ್ಕೆ ಶೇ.55ರಷ್ಟು ಆಸ್ತಿ'!

ಸಂಪತ್ತಿನ ಮರುಹಂಚಿಕೆ ಚರ್ಚೆ ಹೊತ್ತಲ್ಲೇ ವಿವಾದ ಸೃಷ್ಟಿಸಿದ ಹೇಳಿಕೆ
ಸ್ಯಾಮ್ ಪಿತ್ರೋಡಾ ಹೇಳಿಕೆ ವಿರುದ್ಧ ತಿರುಗಿ ಬಿದ್ದ ಬಿಜೆಪಿ ನಾಯಕರು
ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಅಸ್ತ್ರವಾದ ಸ್ಯಾಮ್ ಪಿತ್ರೋಡಾ ಹೇಳಿಕೆ 

ಸಂಪತ್ತಿನ ಮರುಹಂಚಿಕೆ ವಿಷಯದಲ್ಲಿ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಿದ್ದು, ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ(Sam Pitroda) ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ಅಮೆರಿಕದಂತೆ(America) ಭಾರತದಲ್ಲಿ ಡೆತ್ ಟ್ಯಾಕ್ಸ್ ಬೇಕು ಎಂದು ಸ್ಯಾಮ್ ಪಿತ್ರೋಡ ಹೇಳಿದ್ದಾರೆ. ವ್ಯಕ್ತಿಯೊಬ್ಬ ಸತ್ತ ಮೇಲೆ ಆತನ ಆಸ್ತಿ ಮೇಲೆ ಟ್ಯಾಕ್ಸ್(Tax) ಹಾಕಬೇಕು. ಅಮೆರಿಕದಂತೆ ಉತ್ತರಾಧಿಕಾರಕ್ಕೆ ಭಾರತದಲ್ಲಿ ಟ್ಯಾಕ್ಸ್ ಹಾಕಬೇಕು. ಮಕ್ಕಳಿಗೆ ಶೇ.45ರಷ್ಟು ಆಸ್ತಿ ಸಿಗಬೇಕು, ಶೇ.55ರಷ್ಟು ಆಸ್ತಿ ಸರ್ಕಾರಕ್ಕೆ. ಒಬ್ಬ ವ್ಯಕ್ತಿ 10 ಬಿಲಿಯನ್ ಆಸ್ತಿ(Property) ಮಾಡಿದ್ರೆ, ಮಕ್ಕಳಿಗೆ ವರ್ಗಾವಣೆ ಆಗುತ್ತೆ. ಗಳಿಸಿದ ಆಸ್ತಿ ಮಕ್ಕಳ ಪಾಲಾಗಬಾರದು, ದೇಶಕ್ಕೂ ಸಿಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೊಸ ಕಾನೂನು ಜಾರಿ ಎಂದು ಸ್ಯಾಮ್‌ ಪಿತ್ರೋಡಾ ಹೇಳಿದ್ದಾರೆ. ಕಾಂಗ್ರೆಸ್(Congress) ಗೆದ್ದರೆ ನಿಮ್ಮ ಪೂರ್ವಜರ ಆಸ್ತಿ ನಿಮಗೆ ಸಿಗಲ್ಲ. ಜೀವಂತ ಇದ್ರೂ ಟ್ಯಾಕ್ಸ್.. ಸತ್ತ ಮೇಲೆ ಟ್ಯಾಕ್ಸ್ ಹಾಕ್ತಾರೆ ಎಂದು ಛತ್ತೀಸಗಢದಲ್ಲಿ ಮತ್ತೆ ಕಾಂಗ್ರೆಸ್ ವಿರುದ್ಧ ಪಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್. ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಪಿತ್ರೋಡಾ ಹೇಳಿಕೆಯಿಂದ ಅಂತರ. ಸ್ಯಾಮ್ ಪಿತ್ರೋಡಾ ಹೇಳಿಕೆ ಕಾಂಗ್ರೆಸ್‌ನ ನಿಲುವಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಕುತೂಹಲ ಕೆರಳಿಸಿದ ಕಾಮನ್ ಮ್ಯಾನ್ v/s ರಾಯಲ್ ಮ್ಯಾನ್! ಲೋಕಸಮರದಲ್ಲಿ ಯಾರು ಗೆಲ್ತಾರೆ? ಯಾರು ಸೋಲ್ತಾರೆ?

Video Top Stories