Asianet Suvarna News Asianet Suvarna News

ಸಭೆಯಲ್ಲಿ ಸ್ವಪಕ್ಷ ನಾಯಕರ ವಿರುದ್ಧ ಆಕ್ರೋಶ: ವೇದಿಕೆಯಲ್ಲೇ ಬಿಜೆಪಿ ದಿಗ್ಗಜರ ಕೌಂಟರ್‌ ವಾರ್‌

ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತನೊಬ್ಬ ಆಕ್ರೋಶವನ್ನು ಹೊರಹಾಕಿದ್ದಾನೆ.
 

First Published Jun 26, 2023, 11:31 AM IST | Last Updated Jun 26, 2023, 11:31 AM IST

ಬೆಂಗಳೂರು: ಕೇಸರಿ ಕೋಟೆಯಲ್ಲಿ ರಾಜಿ ರಾಜಕಾರಣದ ಬಿರುಗಾಳಿ ಎದ್ದಿದೆ. ಸಿಲಿಕಾನ್‌ ಸಿಟಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗಲಾಟೆ ನಡೆದಿದೆ. ಸ್ವಪಕ್ಷದ ನಾಯಕರ ವಿರುದ್ಧವೇ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದಾರೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕಾರ್ಯಕರ್ತರ ಸಭೆಯನ್ನು ನಡೆಸಲಾಗುತ್ತಿದೆ. ಇದೇ ರೀತಿ ನಿನ್ನೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶವನ್ನು ಹೊರಹಾಕಲಾಗಿದೆ. ಆರು ತಂಡವನ್ನು ರಚಿಸಿ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಎದುರೇ ಕಾರ್ಯಕರ್ತ ಆಕ್ರೋಶವನ್ನು ಹೊರಹಾಕಿದ್ದಾನೆ.

ಇದನ್ನೂ ವೀಕ್ಷಿಸಿ: 24 ಗಂಟೆ, 30 ಸಾವಿರ ಸೈನಿಕರು, 3 ಹೆಲಿಕ್ಯಾಪ್ಟರ್ ಉಡಿಸ್: ಪುಟಿನ್-ವ್ಯಾಗ್ನರ್ ಯುದ್ಧ ನಿಲ್ಲಿಸಿದ್ದು ಯಾರು..?

Video Top Stories