Asianet Suvarna News Asianet Suvarna News

2 ವರ್ಷದ ಬಳಿಕ ಉರುಳುವ ಭೀತಿಯಲ್ಲಿ ಬಿಜೆಪಿ ಜೆಡಿಯು ಮೈತ್ರಿ ಸರ್ಕಾರ, ಆರ್‌ಜೆಡಿ ಜೊತೆ ದೋಸ್ತಿ!

ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ರಾಜ್ಯಪಾಲರನ್ನು ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆ. 
 

Aug 9, 2022, 2:34 PM IST

ಪಾಟ್ನಾ(ಆ.09) ಕಳೆದ ಎರಡು ವರ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದ ಸಿಎಂ ನಿತೀಶ್ ಕುಮಾರ್ ಇದೀಗ ಮೈತ್ರಿ ಮುರಿದುಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ನಗದಿಯಾಗಿದೆ. 4 ಗಂಟೆಗೆ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರಾಜ್ಯಪಾಲರ ಭೇಟಿಯಾಗಲಿದೆ. ಜೊತೆಗೆ ಹೊಸ ಸರ್ಕಾರ ರಚಿಸಲು ಮುಂದಾಗಿದ್ದಾರೆ ಅನ್ನೋ ಮಾತುಗಳ ದಟ್ಟವಾಗಿದೆ. ಕೆಲವೇ ಕ್ಷಣಗಳಲ್ಲಿ ನಿತೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.