Big 3: ಬಡವರ ಜೊತೆ ರಾಜಕಾರಣಿಗಳ ಸಾವಿನ ಆಟ: ಮತದಾರರಿಗೆ ಕೊಟ್ಟ ಕುಕ್ಕರ್ ಬ್ಲಾಸ್ಟ್

ರಾಜ್ಯದಲ್ಲಿ ಮತದಾರರಿಗೆ ಹಂಚಲು ಸಾವಿರಾರು ಕುಕ್ಕರ್'ಗಳು ಬುಕ್ ಆಗಿದ್ದು,ಕಡಿಮೆ ಕ್ವಾಲಿಟಿಯ ಕುಕ್ಕರ್'ಗಳನ್ನು ರಾಜಕಾರಣಿಗಳು ಆರ್ಡರ್ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಮತದಾರರನ್ನು ಓಲೈಸಲು ಬಗೆಬಗೆಯ ಕಸರತ್ತು ಶುರುವಾಗಿವೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಂದಲೂ ಮತದಾರರಿಗೆ ನೀಡಲು ಕುಕ್ಕರ್'ಗಳನ್ನು ಆರ್ಡರ್ ಮಾಡಲಾಗಿದೆ. ಕಡಿಮೆ ದುಡ್ಡಿಗೆ ಲೋ ಕ್ವಾಲಿಟಿ ಕುಕ್ಕರ್ ಬರೀ 400 ರೂಪಾಯಿಗೆ ಸಿಕ್ತಿವೆ. ಈ ಕುಕ್ಕರ್'ಗಳೇ ಮತದಾರರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಆ ಕುಕ್ಕರ್ ಯಾವುದೇ ಕ್ಷಣದಲ್ಲಿ ಬ್ಲಾಸ್ಟ್ ಆಗುವ ಸಾಧ್ಯತೆ ಇದೆ. ಈ ಅದ್ವಾನದ ಹಿಂದೆ ಎಲ್ಲಾ ಪಕ್ಷಗಳ ರಾಜಕಾರಣಿಗಳ ಪಾಲು ಇದೆ. ಬಿಟಿಎಂ ಲೇಔಟ್ ಸೆಕೆಂಡ್ ಸ್ಟೇಜ್'ನ ನಲ್ಲಯ್ಯ ಎಂಬ ಕೂಲಿ ಕಾರ್ಮಿಕನ ಮನೆಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದೆ. ಅನ್ನ ಮಾಡುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡಿದ್ದು, ಪರಿಣಾಮ ನಲ್ಲಯ್ಯನ ತಲೆ ಹಾಗೂ ಕೈ ಮೇಲೆ ಗಾಯಗಳಾಗಿವೆ.

Related Video