ಸ್ವರೂಪ್‌ ಗೆಲ್ಲಿಸಿ, ಜೆಡಿಎಸ್‌ ಅಧಿಕಾರಕ್ಕೆ ತನ್ನಿ: ಭವಾನಿ ರೇವಣ್ಣ

ಹಾಸನದಲ್ಲಿ ಸ್ವರೂಪ್‌ ಪರ ಭವಾನಿ ರೇವಣ್ಣ ಪ್ರಚಾರ
ಸ್ವರೂಪ್‌ ನನ್ನ ಮಗನಿದ್ದಂತೆ, ಗೆಲ್ಲಿಸಿ ಎಂದ ಭವಾನಿ
ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ

Share this Video
  • FB
  • Linkdin
  • Whatsapp

ಹಾಸನ: ಸ್ವರೂಪ್‌ ಪರ ಭವಾನಿ ರೇವಣ್ಣ ಹಾಸನದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಭವಾನಿ ತಮಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದರು, ಆದ್ರೆ ಈಗ ಟಿಕೆಟ್‌ ನೀಡದ ಬೇಸರವನ್ನು ಮರೆತು ಸ್ವರೂಪ್‌ ಪರ ಮತಬೇಟೆ ನಡೆಸುತ್ತಿದ್ದಾರೆ. ಸ್ವರೂಪ್‌ ನನ್ನ ಮಗನಿದ್ದಂತೆ, ಹಾಗಾಗಿ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಭವಾನಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಮತ್ತು ಪಕ್ಷಕ್ಕಿಂತ ನಾನು ದೊಡ್ಡವಳಲ್ಲ. ಹಾಸನದಲ್ಲಿ ಸ್ವರೂಪ್‌ ಗೆಲ್ಲಿಸಿ, ಬಿಜೆಪಿಯನ್ನು ಸೋಲಿಸಿ ಎಂದು ಮತದಾರರಿಗೆ ಕರೆ ನೀಡಿದರು. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಅವರಿಗೆ ನಾನೇ ಕರೆ ಮಾಡಿ, ಶುಭ ಶುಕ್ರವಾರ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಎಂದು ಹೇಳಿದೆ ಎಂದು ಹೇಳುವ ಮೂಲಕ ಹಾಸದನಲ್ಲಿ ಭವಾನಿ ರೇವಣ್ಣ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. 

ಇದನ್ನೂ ವೀಕ್ಷಿಸಿ:ಶಿಕಾರಿಪುರ ಜನ ನನಗೂ ಆಶೀರ್ವಾದ ಮಾಡುತ್ತಾರೆ: ವಿಜಯೇಂದ್ರ

Related Video