ಸ್ವರೂಪ್‌ಗೆ ನಾನು ಎರಡನೇ ತಾಯಿ, ಆತನನ್ನು ಈ ಬಾರಿ ಗೆಲ್ಲಿಸಿ: ಭವಾನಿ ರೇವಣ್ಣ

ಹಾಸನ ಅಖಾಡದಲ್ಲಿ ಜೆಡಿಎಸ್‌ ಅಬ್ಬರದ ಪ್ರಚಾರ
ಸ್ವರೂಪ್‌ ಗೆಲ್ಲಿಸುವಂತೆ ಭವಾನಿ ರೇವಣ್ಣ ಮನವಿ
ಸ್ವರೂಪ್‌ ಪರವಾಗಿ ಒಂದಾದ ರೇವಣ್ಣ ಫ್ಯಾಮಿಲಿ

Share this Video
  • FB
  • Linkdin
  • Whatsapp

ಹಾಸನ: ವಿಧಾನಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಜೆಡಿಎಸ್‌ ಅಬ್ಬರದ ಪ್ರಚಾರ ನಡೆಸುತ್ತಿದೆ. ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ ಪರ ರೇವಣ್ಣ ಫ್ಯಾಮಿಲಿ ಅಖಾಡಕ್ಕೆ ಇಳಿದಿದೆ. ಎಲ್ಲಾ ಮುನಿಸನ್ನು ಮರೆತು ಸ್ವರೂಪ್‌ ಗೆಲ್ಲಿಸಲು ರೇವಣ್ಣ ಕುಟುಂಬ ಪಣ ತೊಟ್ಟಿದೆ. ಸ್ವರೂಪ್‌ ನನ್ನ ಮಗನಿದ್ದಂತೆ. ಆತನಿಗೆ ಇಬ್ಬರು ತಾಯಂದಿರು. ಒಬ್ಬರು ಹೆತ್ತವರು, ನಾನು ಪೋಷಣೆ ಹಾಗೂ ಆರೈಕೆ ಮಾಡೋ ತಾಯಿ. ಇವನು ನನ್ನ ಮಗ ಎಂದು ಹೇಳುವ ಮೂಲಕ ಭವಾನಿ ಸ್ವರೂಪ್‌ ಬೆನ್ನು ತಟ್ಟಿದರು. ಅಲ್ಲದೇ ಅವರನ್ನು ಗೆಲ್ಲಿಸಿ ಎಂದು ಭವಾನಿ ರೇವಣ್ಣ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ರೋಡ್‌ ಮಾಡಿಸಿದ್ರೆ, ಅದು ಅಭಿವೃದ್ಧಿ ಆಗಲ್ಲ. ಈ ಹಿಂದೆ ಶಾಸಕರಾಗಿದ್ದವರು ಏನು ಅಭಿವೃದ್ಧಿ ಮಾಡಿಲ್ಲ ಎನ್ನುವ ಮೂಲಕ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ: ಕರ್ನಾಟಕ ಕುರುಕ್ಷೇತ್ರದಲ್ಲಿ ದಿಗ್ಗಜರ ಪ್ರಚಾರ : ರಾಜ್ಯಕ್ಕೆ ಮತ್ತೆ 'ರಾಗಾ' ಎಂಟ್ರಿ

Related Video