Asianet Suvarna News Asianet Suvarna News

Tejasvi Surya: 3 ವರ್ಷ ಸಂಸದರಾಗಿ ತೇಜಸ್ವಿ ಸೂರ್ಯ ಮಾಡಿದ್ದೇನು? ಮುಸ್ಲಿಮರೆಂದರೆ ದ್ವೇಷ ಯಾಕೆ?

MP Tejasvi Surya News Hour Special: ಏಷ್ಯಾನೆಟ್‌ ಸುವರ್ಣ ನ್ಯೂಸಿನ ನ್ಯೂಸ್‌ ಅವರ್‌ ಸ್ಪೇಷಲ್‌ನಲ್ಲಿ  ತೇಜಸ್ವಿ ಸೂರ್ಯ ನೇರಾ ನೇರ ಪ್ರಶ್ನೆಗಳಿಗೆ ಮತ್ತು ವಿರೋಧಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ

ಬೆಂಗಳೂರು (ಸೆ. 22):  ರಾಜ್ಯ ಬಿಜೆಪಿ ವಕ್ತಾರರಾಗಿದ್ದ ತೇಜಸ್ವಿ ಸೂರ್ಯಗೆ (Tejasvi Surya) ಬಿಜೆಪಿ ಹೈಕಮಾಂಡ್ ಸರ್ಪ್ರೈಸ್ ಎಂಬಂತೆ ಟಿಕೆಟ್ ಘೋಷಿಸಿತ್ತು. ಅನಂತ್ ಕುಮಾರ್ ಅವರಂತ ಹಿರಿಯ ನಾಯಕರು ಪ್ರತಿನಿಧಿಸಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣ (Bengaluru South). ಇಂಥಹ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಕಣಕ್ಕಿಳಿದಿದ್ದು ಕಾಂಗ್ರೆಸ್ಸಿನ ಪಳಗಿದ ರಾಜಕಾರಣಿ ಬಿಕೆ ಹರಿಪ್ರಸಾದ್ (B K Hariprasad). ಆ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಮೂರು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದರು. 

ಕನ್ನಡಿಗನಿಗೆ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನ: ಅತ್ಯಂತ ಕಡಿಮೆ ವಯಸ್ಸಿಗೆ ಸಂಸದರಾದ ಹೆಗ್ಗಳಿಕೆ ಪಡದ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಹೈಕಮಾಂಡ್ ಯುವ ಮೋರ್ಚಾ (BJP Yuva Morcha) ರಾಷ್ಟ್ರೀಯ  ಅಧ್ಯಕ್ಷ ಸ್ಥಾನ ನೀಡಿತು. ಅತ್ಯಂತ ಕಡಿಮೆ ವಯಸ್ಸಿಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ತೇಜಸ್ವಿ ಸೂರ್ಯ. ಪಕ್ಷ ಸಂಘಟನೆಗಾಗಿ ಈಗ ತೇಜಸ್ವಿ ದೇಶಾದ್ಯಂತ ಓಡಾಡುತ್ತಿರುತ್ತಾರೆ. 

News Hour Special: ಸಾವರ್ಕರ್‌ ಹೋರಾಟಗಾರ ಅಥವಾ ಹೇಡಿ: ಯಾವುದು ಸತ್ಯ?

ಲೋಕಸಭಾ ಸದಸ್ಯರಾಗಿರುವ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ಹಲವು ಸದನ ಸಮಿತಿಗಳ ಸದಸ್ಯರಾಗಿದ್ದಾರೆ. ಬೆಂಗಳೂರು (Bengaluru) ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯದ ಮಧ್ಯೆ ಸೇತುವೆಯಂತೆ ಕೆಲಸ ಮಾಡುತ್ತಿದ್ದಾರೆ. ತೇಜಸ್ವಿ ಸೂರ್ಯಗೂ ವಿವಾದಗಳಿಗ ಎಲ್ಲಿಲ್ಲದ ನಂಟು. 

ಮುಸ್ಲಿಮರನ್ನು ಪಂಕ್ಚರ್ ಹಾಕುವವರು ಎಂದು ಹೇಳಿದ್ದು ದೊಡ್ಡ ವಿವಾದವಾಗಿತ್ತು. ಪಕ್ಷದ ಸಿದ್ಧಾಂತವನ್ನ ಸಮರ್ಥಿಸಿಕೊಳ್ಳಲು ಯಾರನ್ನ ಬೇಕಾದರೂ ವಿರೋಧಿಸಬಲ್ಲರು. ಜತೆಗೆ ಅಭಿವೃದ್ಧಿ ವಿಚಾರಗಳಲ್ಲೂ ತೇಜಸ್ವಿ ಸಾಕಷ್ಟು ಕೆಲಸ ಮಾಡಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸಿನ ನ್ಯೂಸ್‌ ಅವರ್‌ ಸ್ಪೇಷಲ್‌ನಲ್ಲಿ  ತೇಜಸ್ವಿ ಸೂರ್ಯ ನಮ್ಮ ಪ್ರಶ್ನೆಗಳಿಗೆ ಮತ್ತು ವಿರೋಧಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.