ಮೇರಾ ಮಿಟ್ಟಿ ಮೇರಾ ಭಾರತ್ ಮೋದಿ ಕನಸಿಗೆ ಎಲ್ಲರೂ ಕೆಲಸ ಮಾಡಿ: ರಾಜೀವ್‌ ಚಂದ್ರಶೇಖರ್‌

ಬೆಂಗಳೂರಿನ ಯಲಹಂಕದ ಬಳಿ ವನಮಹೋತ್ಸವವನ್ನು ಆಚರಿಸಲಾಯಿತು. ಗಿಡಗಳನ್ನು ನೆಡುವ ಮೂಲಕ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

Share this Video
  • FB
  • Linkdin
  • Whatsapp

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ್ ಮಹೋತ್ಸವದ ಹಿನ್ನೆಲೆ ಹಾಗೂ 76ನೇ ಸ್ವಾತಂತ್ರ್ಯ ದಿನವನ್ನು ಬಿಬಿಎಂಪಿ(BBMP) ವಿಶೇಷವಾಗಿ ಆಚರಿಸಿತು. ಬಿಬಿಎಂಪಿ ಯಲಹಂಕ ವಿಭಾಗದಲ್ಲಿ ವಿಭಿನ್ನವಾಗಿ ಮರ ನೆಡುವ ಕಾರ್ಯಕ್ರಮ ಆಯೋಜಿಸಲಾಯ್ತು. ಯಲಹಂಕ ಕೆರೆ ಬಳಿ 76 ವಿವಿಧ ಬಗೆಯ ಗಿಡಗಳನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ನೆಡುವ ಮೂಲಕ ಚಾಲನೆ ನೀಡಿದ್ರು. 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ(Independence Day) ಹಿನ್ನಲೆ ಮಹಾಗಣಿ, ತಬೂಬಿಯಾ ಅವ್ಲಾಂಡ, ನೇರಳೆ, ಹಲಸು, ಇಂಡಿಯನ್ ಚಾರ್ಕೊಲ್, ಹೊಳೆ ದಾಸವಾಳ, ಹತ್ತಿ ಸೇರಿದಂತೆ 76 ವೆರೈಟಿ ಗಿಡಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಎಸ್. ಆರ್. ವಿಶ್ವನಾಥ್, ಬಿಬಿಎಂಪಿ ಜಂಟಿ ಆಯುಕ್ತ ಮೊಹಮ್ಮದ್ ನಯೀನ್, ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ರಾಜೀವ್ ಚಂದ್ರಶೇಖರ್, ಮೇರಾ ಮಿಟ್ಟಿ ಮೇರಾ ಭಾರತ್ ಇದು ಮೋದಿಯವರ ಕನಸು. ಇದಕ್ಕಾಗಿ ಎಲ್ಲರೂ ಜೊತೆಯಾಗಿ ಕೆಲಸ ಮಾಡ್ಬೇಕು. ಮೋದಿಯವರ ಕನಸು ದೇಶ ಅಭಿವೃದ್ಧಿ ಆಗ್ಬೇಕು ಅನ್ನೋದು. 2024ರಲ್ಲಿ ಮೂರನೇ ಅತಿದೊಡ್ಡ ಅಭಿವೃದ್ದಿ ದೇಶ ಆಗ್ಬೇಕು ಅನ್ನೋ ಕನಸು ನನಸಾಗ್ಬೇಕು ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ರಾಷ್ಟ್ರಧ್ವಜ ನೇಕಾರರಿಗೆ ಇದೆಂಥಾ ದುಸ್ಥಿತಿ..? ನೇಕಾರ ಕೇಂದ್ರದಲ್ಲಿ ಹಾವು-ಚೇಳುಗಳದ್ದೇ ಸಾಮ್ರಾಜ್ಯ !

Related Video