Border Dispute: ಬೆಳಗಾವಿ ಗಡಿ ಸಂಘರ್ಷಕ್ಕೆ ಕೇಂದ್ರ ಮಧ್ಯಪ್ರವೇಶ: ಅಮಿತ್‌ ಶಾ ಭೇಟಿಯಾಗಲಿರುವ ಸಂಸದರು

ಬೆಳಗಾವಿಯ ಗಡಿ ಸಂಘರ್ಷಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದ್ದು, ನಿನ್ನೆ ಅಮಿತ್‌ ಶಾ ಅವರನ್ನು ಮಹಾ ಸಂಸದರು ಭೇಟಿ ಆಗಿದ್ದಾರೆ.
 

Share this Video
  • FB
  • Linkdin
  • Whatsapp

ಮಹಾರಾಷ್ಟ್ರದ ಸಂಸದರ ಬೆನ್ನಲ್ಲೇ ರಾಜ್ಯದ ಸಂಸದರು ಅರ್ಲಟ್ ಆಗಿದ್ದು, ಸೋಮವಾರ ಅಮಿತ್‌ ಶಾ ಅವರನ್ನು ಭೇಟಿಯಾಗಲಿದ್ದಾರೆ. ಮಹಾ ತಂತ್ರಕ್ಕೆ ತಿರುಗೇಟು ನೀಡಲು ಪ್ರತಿತಂತ್ರ ರೂಪಿಸಲು ಸಿದ್ಧತೆ ನಡೆದಿದೆ. ಅಮಿತ್‌ ಶಾ ಜೊತೆ ದೂರವಾಣಿ ಮೂಲಕ ಮಾತಾಡಿದ್ದೇನೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗಡಿ ಬಗ್ಗೆ ವಸ್ತು ಸ್ಥಿತಿಯನ್ನು ಹೇಳುತ್ತೇವೆ. ಗೃಹ ಸಚಿವ ಅಮಿತ್‌ ಶಾ ಸಭೆಗೆ ಬರುವಂತೆ ಹೇಳಿದ್ದಾರೆ. ಡಿಸೆಂಬರ್ 14 ಅಥವಾ 15ರಂದು ಸಭೆ ನಡೆಯಲಿದೆ. ಮಹಾರಾಷ್ಟ್ರದ ಸಿಎಂ ಕೂಡ ಸಭೆಯಲ್ಲಿ ಭಾಗಿ ಯಾಗಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

Related Video