ರಾಜಕೀಯ ನೆಲೆ ನೀಡಿದ ಶಿಗ್ಗಾಂವಿ ಉಳಿಸಿಕೊಳ್ಳಲು ಬೊಮ್ಮಾಯಿ ಪ್ಲ್ಯಾನ್: ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ ನಡೆಸಲು ಸಿದ್ಧತೆ
ಶಿಗ್ಗಾಂವಿ ಉಪಚುನಾವಣೆ ಗೆಲ್ಲಿಸಿಕೊಳ್ಳಲು ಬೊಮ್ಮಾಯಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಶಿಗ್ಗಾಂವಿ ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ ನಡೆಸಲು ಬೊಮ್ಮಾಯಿ ನಿರ್ಧಾರ ಮಾಡಿದ್ದಾರೆ.
ಬೈ ಎಲೆಕ್ಷನ್ ಘೋಷಣೆಗೂ ಮುನ್ನವೇ ಶಿಗ್ಗಾಂವಿಯಲ್ಲಿ ಜಿದ್ದಾಜಿದ್ದಿ ಶುರುವಾಗಿದೆ. ರಾಜಕೀಯ ನೆಲೆ ನೀಡಿದ ಶಿಗ್ಗಾಂವಿ ಉಳಿಸಿಕೊಳ್ಳಲು ಬೊಮ್ಮಾಯಿ (Basavaraj Bommai)ಎಂಟ್ರಿ ಕೊಟ್ಟಿದ್ದು, ಶಿಗ್ಗಾಂವಿ ಉಪಚುನಾವಣೆ(Shiggaon by-election) ಗೆಲ್ಲಿಸಿಕೊಳ್ಳಲು ಬೊಮ್ಮಾಯಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ(Dhanyavada yatra) ನಡೆಸಲು ಬೊಮ್ಮಾಯಿ ನಿರ್ಧಾರ ಮಾಡಿದ್ದಾರೆ. ಶಿಗ್ಗಾವಿ ಕ್ಷೇತ್ರದಲ್ಲಿ ಜುಲೈ 12ರಿಂದ ಧನ್ಯವಾದ ಯಾತ್ರೆ ನಡೆಯಲಿದೆ. ಶಿಗ್ಗಾವಿ ಉಪಚುನಾವಣೆಯನ್ನ ಪ್ರತಿಷ್ಠೆಯಾಗಿ ಬೊಮ್ಮಾಯಿ ಸ್ವೀಕರಿಸಿದ್ದಾರೆ. ಬೈ ಎಲೆಕ್ಷನ್ ಘೋಷಣೆಯಾದ್ರೆ ಅಖಾಡಕ್ಕೆ ಕಾಂಗ್ರೆಸ್(Congress) ಎಂಟ್ರಿಯಾಗುತ್ತೆ. ಹೀಗಾಗಿ ಚುನಾವಣೆ ಘೋಷಣೆಗೂ ಮುನ್ನವೇ ಬೊಮ್ಮಾಯಿ ಹಾವೇರಿಗೆ(Haveri) ಎಂಟ್ರಿ ಕೊಟ್ಟಿದ್ದಾರೆ. ಶಿಗ್ಗಾಂವಿಯ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಮತದಾರರನ್ನು ಬೊಮ್ಮಾಯಿ ಭೇಟಿಯಾಗಲಿದ್ದಾರೆ. ಬೊಮ್ಮಾಯಿಗೆ ಸತತ 4 ಬಾರಿ ಗೆಲುವು ನೀಡಿರುವ ಶಿಗ್ಗಾಂವಿ ಕ್ಷೇತ್ರ. ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ಕ್ಷೇತ್ರ ತ್ಯಾಗ ಮಾಡಿರುವ ಬೊಮ್ಮಾಯಿ. ಧನ್ಯವಾದ ಯಾತ್ರೆ ಮೂಲಕ ಮತ್ತೆ ಶಿಗ್ಗಾಂವಿಯಲ್ಲಿ ಪಕ್ಷ ಗಟ್ಟಿಗೊಳಿಸಲು ನಿರ್ಧಾರ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ರಾಜಕಾಲುವೆಗೆ ಬಿದ್ದಿದ್ದ ಯುವಕನ ಶವ ಪತ್ತೆ: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾದ್ನಾ ಹೇಮಂತ್ ?