Asianet Suvarna News Asianet Suvarna News

ರಾಜಕಾಲುವೆಗೆ ಬಿದ್ದಿದ್ದ ಯುವಕನ ಶವ ಪತ್ತೆ: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾದ್ನಾ ಹೇಮಂತ್‌ ?

ರಾಜಕಾಲುವೆಯಲ್ಲಿ ಬಿದ್ದಿದ್ದ ಯುವಕನ ಶವ ಪತ್ತೆ
ವೃಷಭಾವತಿ ನದಿ‌ ಕಾಲುವೆಯಲ್ಲಿ ಬಿದಿದ್ದ ಯುವಕ
ಎರಡು ದಿನದ ನಂತರ ಹೇಮಂತ್ ಮೃತದೇಹ ಪತ್ತೆ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ(Bengaluru) ಮಳೆಯಿಂದ ಮತ್ತೊಂದು ದುರಂತ ಸಂಭವಿಸಿದೆ. ರಾಜಕಾಲುವೆಯಲ್ಲಿ(Rajakaluve) ಬಿದ್ದಿದ್ದ ಯುವಕನ ಶವ(Dead body) ಪತ್ತೆಯಾಗಿದೆ. ವೃಷಭಾವತಿ ನದಿ‌ ಕಾಲುವೆಯಲ್ಲಿ ಯುವಕ ಬಿದಿದ್ದು, ಎರಡು ದಿನದ ನಂತರ ಹೇಮಂತ್ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ ಮಾಡಲಾಯಿತು. ಶುಕ್ರವಾರ ಯುವಕ ಬಿದ್ದ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ. ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿಯ ರಾಜಕಾಲುವೆ ಇದಾಗಿದೆ. ಡಿವೈಡರ್‌ಗೆ ಬೈಕ್‌ ಡಿಕ್ಕಿಯಾದ ಪರಿಣಾಮ ರಾಜಕಾಲುವಿಗೆ ಹೇಮಂತ್ ಬಿದ್ದಿದ್ದ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾದ್ನಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದ್ದು, ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಗೆ ಈ ಸಾವಿಗೆ ಕಾರಣ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಏನಿದು ಸಿಎಂ ಸಂಘರ್ಷದ ಹೊತ್ತಲ್ಲಿ ಸಿದ್ದು ಪಗಡೆಯಾಟ ? ಹುಬ್ಬಳ್ಳಿ ಅಖಾಡದಲ್ಲಿ ಹಳೇ ಪೈಲ್ವಾನನ ಹೊಸ ಆಟ..!

Video Top Stories