Basavaraj Bommai: ಲೋಕಸಭೆಗೆ ಸ್ಪರ್ಧಿಸಿದ್ದೇಕೆ ಮಾಜಿ ಸಿಎಂ..? ಬಿಜೆಪಿ-ಜೆಡಿಎಸ್ ಮೈತ್ರಿ ರಹಸ್ಯ ಬಿಚ್ಚಿಟ್ಟ ಬೊಮ್ಮಾಯಿ..!

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಲೋಕಸಭೆಗೆ ಸ್ಫರ್ಧಿಸಿದ್ದೇಕೆ ಎಂಬುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

First Published May 4, 2024, 10:20 AM IST | Last Updated May 4, 2024, 10:20 AM IST

ಪ್ರಧಾನಿ ಮೋದಿಯವರಂತ ನಾಯಕರ ಜೊತೆ ಕೆಲಸ ಮಾಡಬೇಕು ಹಂಬಲದೊಂದಿಗೆ ಲೋಕಸಭಾ ಚುನಾವಣೆಗೆ(Lok Sabha elections 2024) ಸ್ಫರ್ಧಿಸಿದ್ದೇನೆ. ಮೋದಿಯವರು ಏನು ಮಾನದಂಡ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ ಎಂಬುದು ಇಂದಿಗೂ ಯಾರಿಗೂ ಗೊತ್ತಿಲ್ಲ. ಈ ಬಾರಿ ರಾಜ್ಯದಲ್ಲಿ ನಾವು 25 ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಪ್ರಜ್ವಲ್‌ ರೇವಣ್ಣ ಪ್ರಕರಣದಿಂದ(Prajwal Revanna case) ನಮಗೆ ಏನು ತೊಂದರೆ ಇಲ್ಲ. ಅವರ ವೈಯಕ್ತಿಯ ಜೀವನದ ಬಗ್ಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು. ನಾನು ಕೆರೆಗಳನ್ನು ತುಂಬಿಸುವ ಕಾರ್ಯದಲ್ಲಿ ಬ್ಯೂಸಿಯಾಗಿದ್ದೆ, ಇಂತಹ ಬರಗಾಲದಲ್ಲೂ ನಮ್ಮಲ್ಲಿ ಕೆರೆಗಳಲ್ಲಿ ನೀರಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಕ್ಷೇತ್ರ ಬದಲಾವಣೆ, ಸೋಲಿನ ಭೀತಿಯೋ, ಗೆಲುವಿನ ಲೆಕ್ಕಾಚಾರವೋ! ಅಮೇಥಿ, ರಾಯ್‌ಬರೇಲಿ ರಾಜಕೀಯ ಇತಿಹಾಸವೇನು?