ಕ್ಷೇತ್ರ ಬದಲಾವಣೆ, ಸೋಲಿನ ಭೀತಿಯೋ, ಗೆಲುವಿನ ಲೆಕ್ಕಾಚಾರವೋ! ಅಮೇಥಿ, ರಾಯ್‌ಬರೇಲಿ ರಾಜಕೀಯ ಇತಿಹಾಸವೇನು?
ಅಮೇಥಿಯಿಂದ ಸ್ಪರ್ಧಿಸಲು ಗಾಂಧಿ ಕುಟುಂಬ ನಿರಾಸಕ್ತಿ..?
ಅಮೇಥಿಯಿಂದ ದೂರ ಸರಿದಿದ್ದು ಯಾಕೆ ರಾಹುಲ್ ಗಾಂಧಿ..?
ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಕೈ ಕಸರತ್ತು..!
ಲೋಕಸಭೆ ಚುನಾವಣೆ ಕಾವು ರಂಗೇರಿದೆ. ಅದ್ರಲ್ಲೂ ಇಷ್ಟುದಿನ ಅಮೇಥಿ-ರಾಯ್‌ಬರೇಲಿಯಿಂದ(Raebareli) ಕಾಂಗ್ರೆಸ್‌ನ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲ ಮನೆ ಮಾಡಿತ್ತು. ಆದ್ರೆ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಯ್‌ಬರೇಲಿಯಿಂದ ರಾಹುಲ್ ಗಾಂಧಿಯೇ (Rahul Gandhi) ಕಣಕ್ಕಿಳಿದಿದ್ದಾರೆ. ಇಷ್ಟು ದಿನ ಅಮೇಥಿಯಿಂದ(Amethi) ಸ್ಪರ್ಧಿಸುತ್ತಾರೆಂಬ ಮಾತುಗಳು ಕೇಳಿ ಬರ್ತಿತ್ತು. ಈ ಬೆನ್ನಲ್ಲೆ ರಾಹುಲ್ ರಾಯ್‌ಬರೇಲಿಯಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ದೇಶದಲ್ಲಿ ಲೋಕಸಭೆ ಚುನಾವಣೆಯ(Lok Sabha elections 2024) ಕಾವು ರಂಗೇರುತ್ತಿದ್ದು, ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದ ಜೊತೆಗೆ ಹೈವೋಲ್ಟೇಜ್ ಕ್ಷೇತ್ರಗಳ ಕುರಿತ ಚರ್ಚೆ ಜೋರಾಗಿದೆ. ಅಮೇಥಿ-ರಾಯ್‌ಬರೇಲಿ ಈ ಎರಡೂ ಕ್ಷೇತ್ರಗಳು ಈ ಬಾರಿ ಅತಿ ಹೆಚ್ಚು ಸದ್ದು ಮಾಡ್ತಿದೆ. ಇವು ಕಾಂಗ್ರೆಸ್‌ನ(Congress) ಭದ್ರಕೋಟೆ ಎಂದೇ ಜನಪ್ರಿಯತೆಯನ್ನ ಪಡೆದುಕೊಂಡ ಕ್ಷೇತ್ರಗಳು. ಇಷ್ಟು ದಿನ ಅಮೇಥಿ, ರಾಯ್‌ಬರೇಲಿಯಿಂದ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲವಿತ್ತು. ಅದ್ರಲ್ಲೂ ಕಾಂಗ್ರೆಸ್ ಹೈಕಮಾಂಡ್ ತುಂಬಾ ತಲೆ ಕೆಡಿಸಿಕೊಂಡಿದ್ದ ಕ್ಷೇತ್ರಗಳಿವು. ಮೊದಲೇ ಹೇಳಿದಂತೆ ಇವೆರಡು ಕಾಂಗ್ರೆಸ್‌ನ ಭದ್ರಕೋಟೆ. ಆದ್ರೆ ಕಳೆದ ಬಾರಿಯ ಚುನಾವಣೆಯಲ್ಲಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋಲಬೇಕಾಯ್ತು. ಇದೇ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಕಳೆದುಕೊಂಡ ಭದ್ರಕೋಟೆಯನ್ನು ಮತ್ತೆ ವಶಪಡೆಸಿಕೊಳ್ಳಲು ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿ ಕೂಡ ಇತ್ತು. ಆದ್ರೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಈ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ತನ್ನ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಿದೆ.
ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಒತ್ತಡವಿದ್ದು, ಅತಿಯಾದ ವ್ಯಯ ಇರಲಿದೆ..