ಆರ್ಟಿಕಲ್‌ 370 ರದ್ದು ಮಾಡಲು ಮೋದಿ ಸರ್ಕಾರ ನಿರ್ಧರಿಸಿದ್ದು ಯಾಕೆ? ಇದು ದೇಶದ ಹಿತದೃಷ್ಟಿಗೆ ಎಷ್ಟು ಮುಖ್ಯ?

ಪುಲ್ವಾಮಾ ದಾಳಿಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಆರ್ಟಿಕಲ್‌ 370ಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರದ್ದು ಮಾಡಿತ್ತು.

First Published Apr 14, 2024, 2:44 PM IST | Last Updated Apr 14, 2024, 2:45 PM IST

2019ರ ಫೆಬ್ರವರಿ 14 ಸಂಜೆ 3:15ರ ವೇಳೆಗೆ ಉಗ್ರರ ಅಟ್ಟಹಾಸಕ್ಕೆ ಭಾರತೀಯ(India) ಸೈನಿಕರನ್ನು ಪ್ರಾಣತೆತ್ತಿದ್ದರು. ಬಹುಶಃ ಭಾರತ ದೇಶ ಎಂದೆಂದಿಗೂ ಮರೆಯದ ಭೀಕರ ಘಟನೆಯಿದು. ಮಧ್ಯಾಹ್ನತನಕ ಪ್ರೇಮಿಗಳ ದಿನಾಚರಣೆಯಲ್ಲಿ ಮಿಂದೆದ್ದಿದ್ದ ಜನರು ಸಂಜೆ ವೇಳೆಗೆ ಕಣ್ಣೀರಲ್ಲಿ ಕೈತೊಳೆದಿದ್ದರು. ಜಮ್ಮು ಕಾಶ್ಮೀರದ(Jammu and Kashmir) ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು ಸಾಲಾಗಿ ಸಾಗುತ್ತಿದ್ದ ಸೇನಾ ವಾಹನಗಳನ್ನು ಗುರಿಯಾಗಿಸಿ 350 ಕೆಜಿ ಸ್ಫೋಟಕಗಳನ್ನು ಹೊತ್ತ ಭಯೋತ್ಪಾದಕರ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ದಾಳಿ ನಡೆಸಿ 40 ಯೋಧರನ್ನು ಕೊಂದಿತ್ತು. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ(Narendra Modi) ಸೇಡು ತೀರಿಸಿಕೊಳ್ಳುವ ಶಪಥ ಮಾಡಿದ್ರು. ಅಲ್ಲದೇ ಎರಡನೇ ಬಾರಿಗೆ ಪ್ರಧಾನಿ ಹುದ್ದೆಗೇರಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್‌ 370ಯನ್ನು(Article 370) ರದ್ದು ಮಾಡಿದರು.   

ಇದನ್ನೂ ವೀಕ್ಷಿಸಿ:  News Hour Special: ಯಾರಿಗೆಲ್ಲಾ ಯಾವ ಕಾರಣಕ್ಕೆ ಬಿಜೆಪಿ ಟಿಕೆಟ್‌ ತಪ್ಪಿಸಲಾಗಿದೆ ? ವಿಜಯೇಂದ್ರ ಹೇಳಿದ್ದೇನು?