Asianet Suvarna News Asianet Suvarna News

ಆರು ತಿಂಗಳ ಆಟ..ಯಾರು ಆಟಗಾರ..?ಯಾರು ಸೂತ್ರಧಾರ..? ರಾಜ್ಯದಲ್ಲೂ ನಡೆಯಲಿದ್ಯಾ 'ಮಹಾ'ಚದುರಂಗದಾಟ..?

ರಣರಂಗದಲ್ಲಿ ಮತ್ತೆ ಸದ್ದು ಮಾಡ್ತಿದೆ ಆಪರೇಷನ್ ಪಾಲಿಟಿಕ್ಸ್..!
ಕೈ ಸರ್ಕಾರದ ಬುಡಲ್ಲಿ ಕೇಸರಿ ಕಲಿಗಳ "ಟೈಂ ಬಾಂಬ್" ಫಿಕ್ಸ್..!
ಸರ್ಕಾರದ ಆಯಸ್ಸು, ಆಯಸ್ಸು ಆರೇ ತಿಂಗಳು ಎಂದ ಯತ್ನಾಳ್..!

ರಾಜ್ಯ ರಾಜಕಾರಣದಲ್ಲಿ ಒಂದು ಸಂಚಲನ ಸೃಷ್ಠಿಯಾಗಿದೆ. ಇದು ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅಧಿಕಾರದಲ್ಲಿರೋ ಸರ್ಕಾರವೊಂದನ್ನು ಮಕಾಡೆ ಮಲಗಿಸಿ, ಮತ್ತೊಂದು ಸರ್ಕಾರವನ್ನು ಅಧಿಕಾರಕ್ಕೆ ತರಬಲ್ಲ ತೆರೆಯ ಹಿಂದಿನ ಕಾರ್ಯಾಚರಣೆಯೇ ಈ ಆಪರೇಷನ್. ಕಳೆದ 15 ವರ್ಷಗಳಿಂದ ಕರ್ನಾಟಕದ ರಾಜಕೀಯ ರಣಕ್ಷೇತ್ರದಲ್ಲಿ ಆಪರೇಷನ್(Operation) ರಾಜಕಾರಣದ್ದೇ ಸದ್ದು. ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಪಾಲಿಟಿಕ್ಸ್ ಅದ್ಯಾವ ಪರಿ ನಡೆದಿದೆ ಅನ್ನೋದನ್ನೇ ರಾಜ್ಯದ ಜನತೆ ನೋಡಿದ್ದಾರೆ. ತುಂಬಾ ದೂರ ಹೋಗೋದೇನೂ ಬೇಡ. 2019ರಲ್ಲಿ ಬಿಜೆಪಿ(BJP) ಅಧಿಕಾರದ ಗದ್ದುಗೆ ಹಿಡಿದದ್ದೇ ಆಪರೇಷನ್ ಅಸ್ತ್ರದ ಮೂಲಕ. ಅವತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೇರಿತ್ತು. ಈಗ ರಾಜ್ಯದಲ್ಲಿರೋದು ಕಾಂಗ್ರೆಸ್ (Congress) ಸರ್ಕಾರ. ಪ್ರಚಂಡ ಬಹುಮತದ ಕಾಂಗ್ರೆಸ್ ಸರ್ಕಾರ. 135+3, ಅಂದ್ರೆ ಕೈ ಸರ್ಕಾರಕ್ಕೆ 138 ಶಾಸಕರ ಬಲವಿದೆ. ಇಂಥಾ ಸರ್ಕಾರಕ್ಕೆ ಆಪರೇಷನ್ ಭಯ ಶುರುವಾಗಿದ್ಯಾ..? ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣ, ಕೇಸರಿ ಕಲಿ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಸಿಡಿಸಿರೋ ಬಾಂಬ್.

ಇದನ್ನೂ ವೀಕ್ಷಿಸಿ: ಸ್ವಾತಂತ್ರೋತ್ಸವಕ್ಕೆ ರಿಕ್ಕಿ ಕೇಜ್‌ ಉಡುಗೊರೆ: ಬ್ರಿಟಿಷ್‌ ಆರ್ಕೆಸ್ಟ್ರಾದಲ್ಲಿ ರಾಷ್ಟ್ರಗೀತೆಗೆ ವಿಶೇಷ ಟ್ಯೂನ್‌ !

Video Top Stories