ಸ್ವಾತಂತ್ರೋತ್ಸವಕ್ಕೆ ರಿಕ್ಕಿ ಕೇಜ್ ಉಡುಗೊರೆ: ಬ್ರಿಟಿಷ್ ಆರ್ಕೆಸ್ಟ್ರಾದಲ್ಲಿ ರಾಷ್ಟ್ರಗೀತೆಗೆ ವಿಶೇಷ ಟ್ಯೂನ್ !
ಬ್ರಿಟಿಷರಿಂದ ಭಾರತದ ರಾಷ್ಟ್ರಗೀತೆಗೆ ಸಂಗೀತ ಸಂಯೋಜನೆ ಮಾಡಿಸಿದ್ದು ವಿಶೇಷವಾಗಿದೆ. ರಾಷ್ಟ್ರಗೀತೆಗೆ ಅತ್ಯುನ್ನತ ಮಾದರಿ ಸೃಷ್ಟಿ ಮಾಡೋದು ನನ್ನ ಉದ್ದೇಶವಾಗಿತ್ತು ಎಂದು ರಿಕ್ಕಿ ಕೇಜ್ ಹೇಳಿದ್ದಾರೆ.
ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ ಸಂಗೀತ ನಿರ್ದೇಶಕ ರಿಕ್ಕಿ ಕೇಜ್(Ricky Kej) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ರಾಷ್ಟ್ರಗೀತೆ(national anthem) ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ (tune) ಟಚ್ ಕೊಟ್ಟಿದ್ದಾರೆ. ರಿಕ್ಕಿ ಕೇಜ್ ನಿರ್ದೇಶನದ ವಿಭಿನ್ನ ಬಗೆಯ ರಾಷ್ಟ್ರಗೀತೆ ಸೋಮವಾರ ಬಿಡುಗಡೆಯಾಗಿದೆ. ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ ಅಂದರೆ ಲಂಡನ್ ಅಬೇ ರೋಡ್ ಸ್ಟುಡಿಯೋಸ್ ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಿದ್ದು ವಿಶೇಷವಾಗಿದೆ. ಕೇವಲ 3 ಗಂಟೆ ಅವಧಿಯಲ್ಲಿ 100 ಮಂದಿ ಮ್ಯೂಜಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ.ಈ ಬಗ್ಗೆ ಅವರು ಮಾತನಾಡಿದ್ದು, ರಾಷ್ಟ್ರಗೀತೆ ನಾನು ಕಲಿತ ಮೊದಲ ಸಂಗೀತವಾಗಿದೆ. ಬಾಲ್ಯದಲ್ಲಿ ರೈಮ್ಸ್ ಕಲಿಯುವುದಕ್ಕೂ ಮೊದಲೇ ರಾಷ್ಟ್ರಗೀತೆ ಕಲಿತೆ. ರಾಷ್ಟ್ರಗೀತೆ ಸದಾಕಾಲ ನನ್ನೊಳಗಿದೆ. ಈ ಮೊದಲು ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ(Royal Philharmonic Orchestra) ಜತೆ ಕೆಲಸ ಮಾಡಿದ್ದೇನೆ. ಇದೊಂದು ಅದ್ಭುತ ಆರ್ಕೆಸ್ಟ್ರಾ. ಹೀಗಾಗಿ ನಮ್ಮ ರಾಷ್ಟ್ರಗೀತೆಯನ್ನ, ಈ ಆರ್ಕೆಸ್ಟ್ರಾ ಜೊತೆಗೂಡಿಸಲು ಯೋಚಿಸಿದೆ ಎಂದು ರಿಕ್ಕಿ ಕೇಜ್ ಹೇಳಿದ್ದಾರೆ.
ರಾಷ್ಟ್ರಗೀತೆಯನ್ನ ಅತ್ಯುನ್ನತ ಸ್ವರೂಪದಲ್ಲಿ ಪ್ರಸ್ತುತಪಡಿಸಲು ನಿರ್ಧರಿಸಿದೆ. ಇದರ ಸಿದ್ಧತೆಗಾಗಿ ಮೂರು ತಿಂಗಳು ತೆಗೆದುಕೊಂಡೆವು. ಲಂಡನ್ ಅಬೇ ರೋಡ್ ಸ್ಟುಡಿಯೋಸ್‌ನ ಲ್ಲಿ ರಾಷ್ಟ್ರಗೀತೆ ರೆಕಾರ್ಡ್ ಮಾಡಿಲಾಗಿದೆ. ರಾಯಲ್ ಫಿಲ್ಹಾರ್ಮೋನಿಕ್, ಭಾರತದ ರಾಷ್ಟ್ರಗೀತೆಯನ್ನ ರೆಕಾರ್ಡ್ ಮಾಡಿದ ಅತ್ಯಂತ ದೊಡ್ಡ ಆರ್ಕೆಸ್ಟ್ರಾವಾಗಿದೆ. ಈ ಅನುಭವ ನಿಜಕ್ಕೂ ಉತ್ತಮವಾಗಿತ್ತು. ರೆಕಾರ್ಡಿಂಗ್ ರೂಮ್ನಲ್ಲಿ ನಿಲ್ಲುವುದು,100 ಮ್ಯೂಸಿಷಿಯನ್ಸ್ ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ರಿಕ್ಕಿ ಕೇಜ್ ಹೇಳಿದರು.
ಇದನ್ನೂ ವೀಕ್ಷಿಸಿ: ಕೆಂಪುಕೋಟೆಯಿಂದ ಮಣಿಪುರ ಜನತೆಗೆ ಮೋದಿ ಭರವಸೆ, ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವಿಶ್ಲೇಷಣೆ!