News Hour: ಬಿಜೆಪಿಯಲ್ಲಿ ಬಣ ರಾಜಕೀಯ, ಯತ್ನಾಳ್ ಬಣದಿಂದ ಮುಂದುವರಿದ ಹೋರಾಟ

ಬಿಜೆಪಿಯಲ್ಲಿ ಬಣ ರಾಜಕೀಯ ಬಿರುಸಾಗಿದೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಯಾರ ಎಚ್ಚರಿಕೆಗೂ ಬಗ್ಗದೇ ಬಿವೈ ವಿಜಯೇಂದ್ರ ವಿರುದ್ಧ ಮುಗಿಬಿದ್ದಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ನ.29): ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದಲ್ಲಿ ಕಂಡಿರುವ ಸೋಲು ಬಿಜೆಪಿಯನ್ನು ಇನ್ನಷ್ಟು ಘಾಸಿ ಮಾಡಿದೆ. ಗಾಯದ ಮೇಲೆ ಬರೆ ಎಳೆದಂತೆ ಬಿಜೆಪಿಯ ಆಂತರಿಕ ಕಚ್ಚಾಟ ಕೂಡ ಜೋರಾಗಿದೆ.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎನ್ನುವ ಎರಡು ಬಣಗಳು ಬಿಜೆಪಿಯಲ್ಲಿ ರಚಿತವಾಗಿರುವುದು ಈಗ ಜಗಜ್ಜಾಹೀರಾಗಿದೆ. ಕಂಡಕಂಡಲ್ಲಿ ಯತ್ನಾಳ್‌, ಬಿವೈ ವಿಜಯೇಂದ್ರ ಬಣದ ನಾಯಕರನ್ನು ಬೈದಾಡಿಕೊಂಡು ತಿರುಗಾಡುತ್ತಿದ್ದಾರೆ.

ಹಬ್ಬಕ್ಕೆ ಆನೆ ಇಲ್ಲದಿದ್ದರೆ, ಹಿಂದೂ ಧರ್ಮ ಕುಸಿಯುವಷ್ಟು ದುರ್ಬಲವಾಗಿಲ್ಲ: ಕೇರಳ ಹೈಕೋರ್ಟ್‌

ಈಗಾಗಲೇ ಬಿಜೆಪಿಯ ಆಂತರಿಕ ಕಚ್ಚಾಟವನ್ನು ಶಮನ ಮಾಡುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಹೈಕಮಾಂಡ್‌ನತ್ತ ನೋಡಿದ್ದಾರೆ. ಇನ್ನು ಯತ್ನಾಳ್‌ ಯಾರಿಗೆ ದೂರು ಕೊಟ್ಟರೂ ತಾವು ಹೆದರೋದಿಲ್ಲ ಎಂದಿದ್ದಾರೆ.

Related Video