ಹಬ್ಬಕ್ಕೆ ಆನೆ ಇಲ್ಲದಿದ್ದರೆ, ಹಿಂದೂ ಧರ್ಮ ಕುಸಿಯುವಷ್ಟು ದುರ್ಬಲವಾಗಿಲ್ಲ: ಕೇರಳ ಹೈಕೋರ್ಟ್‌

ತ್ರಿಪುಣಿತುರಾ ದೇವಸ್ಥಾನದ ಉತ್ಸವದಲ್ಲಿ ಆನೆಗಳ ನಡುವೆ ಮೂರು ಮೀಟರ್ ಅಂತರ ಕಾಯ್ದುಕೊಳ್ಳುವ ನಿರ್ದೇಶನದಿಂದ ವಿನಾಯಿತಿ ಕೋರಿ ಕೊಚ್ಚಿನ್ ದೇವಸ್ವಂ ಬೋರ್ಡ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.

 

Kerala High Court Hinduism not fragile that it will collapse without elephant for festival san

ಕೊಚ್ಚಿ (ನ.29): ತ್ರಿಪುಣಿತುರಾದಲ್ಲಿ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಆನೆಗಳ ನಡುವೆ ಮೂರು ಮೀಟರ್ ಅಂತರವನ್ನು ಕಾಯ್ದುಕೊಳ್ಳುವ ಮಾರ್ಗಸೂಚಿಯನ್ನು ಅನುಸರಿಸುವುದರಿಂದ ವಿನಾಯಿತಿ ಕೋರಿ ಕೊಚ್ಚಿನ್ ದೇವಸ್ವಂ ಬೋರ್ಡ್ (ಸಿಡಿಬಿ) ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಪ್ರಾಣಿಗಳ ಯೋಗಕ್ಷೇಮದ ವಿಚಾರವಾಗಿ ಈ ನಿರ್ದೇಶನ ಅತ್ಯಗತ್ಯ ಎಂದು ನ್ಯಾಯಮೂರ್ತಿಗಳಾದ ಎಕೆ ಜಯಶಂಕರನ್ ನಂಬಿಯಾರ್ ಮತ್ತು ಗೋಪಿನಾಥ್ ಪಿ ಅವರ ಪೀಠ ಹೇಳಿದೆ. ಅಂತಹ ಆಚರಣೆಗಳು ಸಾಂವಿಧಾನಿಕ ತತ್ವಗಳೊಂದಿಗೆ ಹೊಂದಿಕೆಯಾಗಬೇಕು ಎಂದು ಪೀಠ ತಿಳಿಸಿದೆ.

ಆನೆಗಳ ಬಳಕೆಯನ್ನು ಯಾವುದೇ ಧರ್ಮಗ್ರಂಥವು ಕಡ್ಡಾಯಗೊಳಿಸದೇ ಇದ್ದಲ್ಲಿ, ಅದು ಅತ್ಯಗತ್ಯವಾದ ಧಾರ್ಮಿಕ ಆಚರಣೆ ಎನಿಸಿಕೊಳ್ಳೋದಿಲ್ಲ. ನಾವು ಆನೆಗಳನ್ನು ಬಳಸಬೇಡಿ ಎಂದು ಹೇಳುತ್ತಿಲ್ಲ. ಜನರ ನಂಬಿಕೆ ಮತ್ತು ಧಾರ್ಮಿಕ ಉತ್ಸಾಹವನ್ನು ಉಳಿಸಿಕೊಳ್ಳಲು, ಆನೆಗಳನ್ನು ಹೊಂದಿರುವುದು ಒಳ್ಳೆಯದು. ಆದರೆ, 3 ಮೀಟರ್‌ ಅಂತರವನ್ನು ಕಾಯ್ದುಕೊಳ್ಳಬೇಕು ಎನ್ನುವುದು ನ್ಯಾಯಯುತವಾಗಿದೆ' ಎಂದು ನ್ಯಾಯಮೂರ್ತಿ ನಂಬಿಯಾರ್ ಹೇಳಿದ್ದಾರೆ.

ತ್ರಿಪುಣಿತುರಾದ ಪೂರ್ಣತ್ರಯೀಶ ದೇವಸ್ಥಾನದಲ್ಲಿ ಮುಂಬರುವ ವೃಶ್ಚಿಕೋತ್ಸವಕ್ಕೆ ವಿನಾಯಿತಿ ನೀಡುವಂತೆ ಸಿಡಿಬಿ ಅರ್ಜಿ ಸಲ್ಲಿಸಿತ್ತು. ಮಂಡಳಿಯನ್ನು ಪ್ರತಿನಿಧಿಸಿದ ವಕೀಲ ಕೆ.ಪಿ.ಸುಧೀರ್, ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ 15 ಆನೆಗಳನ್ನು ಮೆರವಣಿಗೆ ಮಾಡುವುದು ಧಾರ್ಮಿಕ ಕ್ರಿಯೆಯ ಅವಿಭಾಜ್ಯ ಅಂಗವಾಗಿದೆ ಎಂದಿದ್ದರು. ನಿರ್ದೇಶನಗಳನ್ನು ಪಾಲಿಸುವುದರಿಂದ ಉತ್ಸವದಲ್ಲಿ ಭಾಗವಹಿಸಬಹುದಾದ ಆನೆಗಳ ಸಂಖ್ಯೆಯನ್ನು ಮಿತಿಗೊಳಿಸುತ್ತದೆ, ಹಬ್ಬಕ್ಕೆ ಸಂಬಂಧಿಸಿದ ದೀರ್ಘಕಾಲದ ಸಂಪ್ರದಾಯಗಳಿಗೆ ಅಡ್ಡಿಯಾಗುತ್ತದೆ ಎಂದು ಅರ್ಜಿ ಸಲ್ಲಿಸಲಾಗಿತ್ತು.

ಈ ವೇಳೆ ನ್ಯಾಯಮೂರ್ತಿ ನಂಬಿಯಾರ್ ಅವರು, "ಹಿಂದೂ ಧರ್ಮವು ಎಷ್ಟು ದುರ್ಬಲವಾಗಿದೆಯೆಂದರೆ ಅದು ಆನೆಯ ಉಪಸ್ಥಿತಿಯಿಲ್ಲದೆ ಕುಸಿಯುತ್ತದೆ ಎಂದು ನಾವು ನಂಬೋದಿಲ್ಲ' ಎಂದಿದ್ದಾರೆ. ಅಗತ್ಯ ಧಾರ್ಮಿಕ ಆಚರಣೆಗಳನ್ನು ಹೊರತುಪಡಿಸಿ ಎಲ್ಲಾ ಆಚರಣೆಗಳು ಸಾಂವಿಧಾನಿಕ ಆದೇಶಕ್ಕೆ ಮಣಿಯಬೇಕು ಎಂದು ಪೀಠವು ಒತ್ತಿಹೇಳಿದೆ.

Rules Change From 1st December: ಡಿಸೆಂಬರ್‌ನಲ್ಲಿ ಬದಲಾಗಲಿವೆ ಈ ನಿಯಮಗಳು

"ಆನೆಗಳಿಲ್ಲದೆ ಧರ್ಮವು ಅಸ್ತಿತ್ವದಲ್ಲಿಲ್ಲ ಎಂದು ನೀವು ತೋರಿಸುವವರೆಗೆ ಅತ್ಯಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆಯೇ ಇಲ್ಲ" ಎಂದು ನ್ಯಾಯಮೂರ್ತಿ ಗೋಪಿನಾಥ್ ತಿಳಿಸಿದ್ದಾರೆ. ಪ್ರಾಣಿ ಹಿಂಸೆಯನ್ನು ಪರಿಹರಿಸಲು ಜುಲೈ 2021 ರಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯನ್ನು ಪ್ರಾರಂಭಿಸಿತು.

Bank Holiday: ಡಿಸೆಂಬರ್‌ ತಿಂಗಳಲ್ಲಿ ಬ್ಯಾಂಕ್‌ ರಜೆಗಳ ಲಿಸ್ಟ್‌!

ಪ್ರಸ್ತುತ, ಈ ಪ್ರಕರಣದಲ್ಲಿ ನ್ಯಾಯಾಲಯವು ಬಂಧಿತ ಆನೆಗಳ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಿದೆ, ಇದು ಮೆರವಣಿಗೆಗಳು ಮತ್ತು ಉತ್ಸವಗಳ ಸಮಯದಲ್ಲಿ ಕಠಿಣ ಪರಿಸ್ಥಿತಿಗಳಿಗೆ ಒಳಗಾಗುತ್ತದೆ ಎಂದು ಹೇಳಿದೆ. ಹೊರಡಿಸಲಾದ ಮಾರ್ಗಸೂಚಿಗಳಲ್ಲಿ ಉತ್ಸವಗಳ ಕಡ್ಡಾಯ ನೋಂದಣಿ ಮತ್ತು ಮೆರವಣಿಗೆಯ ಸಮಯದಲ್ಲಿ ಆನೆಗಳ ನಡುವೆ ಕನಿಷ್ಠ ಮೂರು ಮೀಟರ್ ಅಂತರವನ್ನು ಇಟ್ಟುಕೊಳ್ಳುವುದು ಸೇರಿವೆ. ಕೊಚ್ಚಿನ್ ದೇವಸ್ವಂ ಮಂಡಳಿ ಪರ ವಕೀಲ ಕೆ.ಪಿ.ಸುಧೀರ್ ವಾದ ಮಂಡಿಸಿದ್ದರು. ಕೇರಳ ಉತ್ಸವ ಸಮನ್ವಯ ಸಮಿತಿಯನ್ನು ವಕೀಲ ರೆಂಜಿತ್ ಬಿ ಮಾರಾರ್ ಪ್ರತಿನಿಧಿಸಿದ್ದರು.
 

Latest Videos
Follow Us:
Download App:
  • android
  • ios