Asianet Suvarna News Asianet Suvarna News

ಸಿದ್ದರಾಮಯ್ಯ, ದರ್ಶನ್, ಮುನಿರತ್ನ , ರೇವಣ್ಣ ಅಂಡ್ ಸನ್ಸ್ ಸೇರಿ 6 ಮಂದಿಗೆ ಕೇಡುಗಾಲ: ಜ್ಯೋತಿಷ್ಯದಲ್ಲಿ ಉತ್ತರ!

ರಾಜ್ಯದ ಪ್ರಮುಖ ವ್ಯಕ್ತಿಗಳಾದ ಸಿದ್ದರಾಮಯ್ಯ, ದರ್ಶನ್, ಮುನಿರತ್ನ , ರೇವಣ್ಣ ಅಂಡ್ ಸನ್ಸ್ ಸಂಕಷ್ಟ ಎದುರಿಸುತ್ತಿದ್ದು, ಜ್ಯೋತಿಷ್ಯದಲ್ಲಿ ಪರಿಹಾರ ಇದೆಯೇ ಎಂಬ ಪ್ರಶ್ನೆ ಎದ್ದಿದೆ.

First Published Sep 30, 2024, 8:48 PM IST | Last Updated Sep 30, 2024, 9:16 PM IST

ಬೆಂಗಳೂರು (ಸೆ.30): ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಪ್ರಮುಖ ಮತ್ತು ಪ್ರಸಿದ್ಧ ವ್ಯಕ್ತಿಗಳಿಗೆ ಕೆಡುಗಾಲ ಶುರುವಾಗಿದೆ. ಇವರೆಲ್ಲರಿಗೂ ಶತ್ರುಬಾಧೆ, ಸ್ತ್ರೀ ಕಂಟಕ, ರಾಜಕೋಪ, ಭೂತಾಯಿ ದೋಷ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಇದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆಯಾ? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ..

ಜೀವನದಲ್ಲಿ ನಮ್ಮನ್ನ ಕಾಡೋ ಆ ಅನುಮಾನಗಳಿಗೆ,  ಜೋತಿಷ ಶಾಸ್ತ್ರದಲ್ಲಿರೋ ಆ ಉತ್ತರ ಏನು..? ಜಾತಕದಲ್ಲಾಗೋ ಅದ್ಯಾವ ಬದಲಾವಣೆ, ಬದುಕನ್ನೇ ಚಿತ್ರವಿಚಿತ್ರ ಆಘಾತಕ್ಕೆ ಗುರಿ ಮಾಡುತ್ತದೆ. ಎಂಥವರನ್ನೇ ಆಗ್ಲಿ ಸಂಕಷ್ಟದ ಸಮಯಗಳು ಕಾಡದೇ ಬಿಡೋದಿಲ್ಲ. ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಸಿದ್ದರಾಮಯ್ಯ, ಇವತ್ತು ಆರೋಪಿ ಸ್ಥಾನದಲ್ಲಿ ನಿಂತಿರೋದೇ ಈ ಮಾತಿಗೆ ಸಾಕ್ಷಿಯಾಗಿದೆ. ಇದೇ ಥರ ರಾಜ್ಯದ ವಿವಿಐಪಿಗಳು ಆರೋಪ ಹೊತ್ತಿದ್ದಾರೆ.

ಇದನ್ನೂ ಓದಿ: ಮುಡಾ ಕೇಸಿಗೆ ಎಂಟ್ರಿಕೊಟ್ಟ ಇಡಿ; ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ!

ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕು ಅಂದ್ರೆ, ಶಾಸ್ತ್ರಗ್ರಂಥಗಳ ಆಳಕ್ಕಿಳಿದು ಅಧ್ಯಯನ ಮಾಡ್ಬೇಕು. ಜಾತಕ ನೋಡಿದ್ರೆ, ಏನು ಕಂಟಕ, ಎಂಥಾ ಸವಾಲು ಎದುರಾಗಲಿದೆ ಅನ್ನೋದು ಗೊತ್ತಾಗುತ್ತದೆ. ಆದ್ರೆ ಅಷ್ಟು ಮಾತ್ರವೇ ಅಲ್ಲ, ಅದನ್ನೂ ಮೀರಿದ ಸಂಗತಿಯೂ ಜೋತಿಷ ಶಾಸ್ತ್ರದಲ್ಲಿ ಅಡಗಿದೆ. ಸಿದ್ದರಾಮಯ್ಯ, ದರ್ಶನ್, ಮುನಿರತ್ನ , ರೇವಣ್ಣ ಹಾಗೂ ಇಬ್ಬರು ಮಕ್ಕಳು. ಈ ಆರೂ ಮಂದಿ ವಿಐಪಿಗಳಿಗೆ, ಒಟ್ಟೊಟ್ಟಿಗೆ ಕೇಡುಗಾಲ ಶುರುವಾಗಿದೆ. ಅದರ ಅಂತಿಮ ಫಲ ಏನಾಗಲಿದೆಯೋ ಗೊತ್ತಿಲ್ಲ. ಆದ್ರೆ ಇವರೆಲ್ಲರಿಗೂ ಕಾನೂನು ಒಡ್ಡಿರೋ ಅಗ್ನಿಪರೀಕ್ಷೆ ಎದುರಾಗಿದೆ.