Asianet Suvarna News Asianet Suvarna News

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ, ಕಾಂಗ್ರೆಸ್‌ ಗಾಳದಿಂದ ಕೇಸರಿ ಪಡೆಗೆ ಸಂಕಷ್ಟ!

ಬಿಜೆಪಿ ತಿರುಗುಬಾಣವಾದ ಬಾಬುರಾವ್ ಚಿಂಚನಸೂರು, ಜಾಧವ್ ಸೇರಿ ಹಲವು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಆಹ್ವಾನಸಿದ್ದು ಕ್ಷೇತ್ರ ಯಾವುದು? ಲಿಸ್ಟ್‌ಗೆ ಹೊಸ ಕ್ಷೇತ್ರ ಸೇರ್ಪಡೆ ಸೇರಿದಂತೆ ಇಂದಿನ ಇಡೀ ದಿನ ಪ್ರಮುಖ ಸುದ್ದಿ ಕಂಪ್ಲೀಟ್ ಪ್ಯಾಕೇಜ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಕಲ್ಯಾಣ ಕರ್ನಾಟಕದ 40 ಕ್ಷೇತ್ರಗಳಲ್ಲಿ ಹೆಚ್ಚಿನ ಗೆಲುವು ದಾಖಲಿಸಿ ಹೆಚ್ಚಿನ ಪ್ರಾಶಸ್ತ್ಯ ನೀಡಿತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರ ಒಬ್ಬರ ಹಿಂದೆ ಒಬ್ಬರು ಮತ್ತೆ ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದಾರೆ .ಪ್ರಿಯಾಂಕ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಸೋಲಿಸುವುದಾಗಿ ತೊಡೆ ತಟ್ಟಿದ ಬಾಬುರಾವ್ ಚಿಂಚನಸೂರು ಇದೀಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಮನೆಯಲ್ಲಿ ಕಾಂಗ್ರೆಸ್ ಸೇರಿದ ಚಿಂಚನಸೂರು ಇದೀಗ ಬಿಜೆಪಿ ವಿರುದ್ಧ ತೊಡೆತಟ್ಟಿದ್ದಾರೆ.ಬಾಬುರಾವ್ ಚಿಂಚನಸೂರು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಇದೀಗ ಹಲವು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸದ್ದಿಲ್ಲದೇ ಆಹ್ವಾನ ನೀಡಿದ್ದಾರೆ. ಉಮೇಶ್ ಜಾಧವ್, ಪುತ್ರು ಅವಿನಾಶ್ ಜಾದವ್, ಮಾಲಿಕಯ್ಯ ಗುತ್ತೇದಾರ್, ಎಬಿ ಮಾಲಕರೆಡ್ಡಿ, ಸುನಿಲ್ ವಲ್ಯಾಪುರೆ ಸೇರಿದಂತೆ ಹಲವು ಬಿಜೆಪಿ ನಾಯರಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ.